ಪಾದಚಾರಿಗಳ ಮೇಲೆ ಬಸ್ ಓಡಿಸಿದ ಹುಚ್ಚ: 7 ಸಾವು

ಇಂತಹ ದುಸ್ಸಾಹಸಕ್ಕೆ ಮುಂದಾದ MSRTC ಬಸ್ ಚಾಲಕ ಸಂತೋಷ್ ಮಾನೆನನ್ನು ನಿಲಯಂ ಟಾಕೀಸ್ ಬಳಿ ಪೊಲೀಸರು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣದಲ್ಲಿ ಇದುವರೆಗೂ ಕನಿಷ್ಠ 7 ಮಂದಿ ಸಾವಗೀಡಾಗಿದ್ದಾರೆ. 17 ಮಂದಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಸ್ವರ್ಣಗೇಟ್ ಎಸ್ ಟಿ ಡಿಪೊಕ್ಕೆ ತೆರಳಿದ ಸಂತೋಷ್ ಮಾನೆ ಅದು ಹೇಗೋ ಪುಣೆ-ಸತಾರಾ-ಪುಣೆ ಮಾರ್ಗದ MSRTC ಬಸ್ಸಿನೊಳಕ್ಕೆ ನುಸುಳಿದ್ದಾನೆ. ತಕ್ಷಣ ಬಸ್ಸನ್ನು ರಸ್ತೆಗೆ ತಂದು ಹುಚ್ಚಾಪಟ್ಟೆ ಜನರ ಮೇಲೆ ಚಲಾಯಿಸಿದ್ದಾನೆ. ಮುಂದೆ ಬರುತ್ತಿರುವ ವಾಹನಗಳು, ಜನರನ್ನು ಲೆಕ್ಕಿಸದೆ ವಿಪರೀತ ಎನ್ನಿಸುವಷ್ಟು ವೇಗದೊಂದಿಗೆ ಅಡ್ಡದಾರಿಯಲ್ಲಿ ಚಲಾಯಿಸಿದ್ದಾನೆ.
ಬಳಿಕ ಅಲ್ಲಿಂದ ಬಸ್ಸನ್ನು 25 ಕಿ.ಮೀ. ದೂರ ಚಲಿಸಿಕೊಂಡು ಹೋಗಿದ್ದಾನೆ. ದಾರಿ ಮಧ್ಯೆ ಎಲ್ಲೆಂದರಲ್ಲಿ ಬಸ್ಸನ್ನು ಗುದ್ದಿದ್ದಾನೆ. ಆದರೆ ದಂಡೇಕರ್ ಫ್ಲೈ ಓವರ್ ಬಳಿ ಪೊಲೀಸರು ಹೊಂಚು ಹಾಕಿ ಬಸ್ಸನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications