ಡಾ ದೇವಿ ಶೆಟ್ಟಿ ಸೇರಿ ಐವರಿಗೆ ಪದ್ಮ ಪ್ರಶಸ್ತಿ

Dr Devi Prasad Shetty
ನವದೆಹಲಿ, ಜ.24: 2012ನೇ ಸಾಲಿನ ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಡಾ. ದೇವಿ ಪ್ರಸಾದ್ ಶೆಟ್ಟಿ ಸೇರಿದಂತೆ ನಾಲ್ವರು ಕನ್ನಡಿಗರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಒಟ್ಟು 14 ವಿವಿಧ ವಿಭಾಗಗಳಲ್ಲಿ 109 ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ರಾಷ್ಟ್ರಪತಿಗಳ ಸಮ್ಮತಿ ಸಿಕ್ಕಿದೆ.

ಕರ್ನಾಟಕದ ವಿಜೇತರು: ನಾರಾಯಣ ಹೃದಯಾಲಯದ ವೈದ್ಯಾಧಿಕಾರಿ ಡಾ. ದೇವಿ ಪ್ರಸಾದ್ ಶೆಟ್ಟಿ ಅವರಿಗೆ ವೈದ್ಯಕೀಯ ವಿಭಾಗದ ಸೇವೆಗಾಗಿ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವೃತ್ತಿ ರಂಗಭೂಮಿ ಕಲಾವಿದೆ ಆರ್ ನಾಗರತ್ನಮ್ಮ, ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ವಿಭಾಗದ ಸೇವೆಗಾಗಿ ಕೋಟ ಉಲ್ಲಾಸ ಕಾರಂತ್, ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಡಾ. ಯಜ್ಞೇಸ್ವಾಮಿ ಸುಂದರ್ ರಾಜನ್ ಅವರಿಗೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

5 ಪದ್ಮವಿಭೂಷಣ, 27 ಪದ್ಮಭೂಷಣ ಹಾಗೂ 77 ಪದ್ಮಶ್ರೀ ಪ್ರಶಸ್ತಿಗಳನ್ನು ಹೆಸರಿಸಲಾಗಿದೆ ಇದರಲ್ಲಿ 19 ಜನ ಮಹಿಳೆಯರು ಪ್ರಶಸ್ತಿ ಪಟ್ಟಿಯಲ್ಲಿರುವುದು ವಿಶೇಷ. ಮಾರ್ಚ್/ ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿಗಳು ಪ್ರಧಾನ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+