ಮುಸ್ಲಿಂ ಮತ ಪ್ರಚಾರಕರನ್ನು ಹೊರದಬ್ಬಿದ ಶ್ರೀಲಂಕಾ

ಪ್ರವಾಸಿ ವೀಸಾದಡಿಯಲ್ಲಿ ಶ್ರೀಲಂಕಾಕೆ ಬಂದಿರುವ ಇಸ್ಲಾಂ ವಿದ್ವಾಂಸರು ಮತ ಪ್ರಚಾರ, ಬೋಧನೆಗಳಲ್ಲಿ ತೊಡಗಿದ್ದಾರೆ. ಮತಪ್ರಚಾರದ ಹಕ್ಕನ್ನು ಪಡೆದಿಲ್ಲ ಎಂದು ಶ್ರೀಲಂಕಾದ ವಲಸೆ ಇಲಾಖೆಯ ಮುಖ್ಯಸ್ಥ ಚುಲಾನಂದ ಪರೇರಾ ಆರೋಪಿಸಿದ್ದಾರೆ.
ಪ್ರವಾಸಿ ವೀಸಾದಡಿಯಲ್ಲಿ ರಾಷ್ಟ್ರದಲ್ಲಿರುವ ಸ್ನೇಹಿತರು ಹಾಗೂ ಕುಟುಂಬ ವರ್ಗವನ್ನು ಭೇಟಿ ಮಾಡಬಹುದು. ಆದರೆ ಇಸ್ಲಾಂ ಪ್ರಬೋಧನೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪರೇರಾ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.
ಅಂತಾರಾಷ್ಟ್ರೀಯ ಇಸ್ಲಾಮಿಕ್ ಮೂವ್‌ಮೆಂಟ್ ಆಗಿರುವ ತಬ್ಲಿಗ್ ಜಮಾಅತ್‌ಗೆ ಈ ವಿದ್ವಾಂಸರು ಸೇರಿದ್ದಾರೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಮಾಲ್ಡೀವ್ಸ್ ಹಾಗೂ ಅರಬ್ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ. ಜನವರಿ 31ರೊಳಗೆ ಶ್ರೀಲಂಕಾ ತೊರೆಯುವಂತೆ ಆದೇಶ ನೀಡಲಾಗಿದೆ.
ಶ್ರೀಲಂಕಾದಲ್ಲಿರುವ ಸಿಂಹಳೀಯರು ಹಾಗೂ ತಮಿಳರ ಬಳಿಕ ಮುಸ್ಲಿಂ ಸಮುದಾಯ ಮೂರನೆಯ ಅತಿದೊಡ್ಡ ಸಮುದಾಯವಾಗಿದೆ.












Click it and Unblock the Notifications