ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೋರ್ಟ್ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋದ ಕೃಷ್ಣ

By Shami
|
Google Oneindia Kannada News

SM Krishna
ನವದೆಹಲಿ, ಜ.24: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಎಂ. ಕೃಷ್ಣ ಅವರು ಮಂಗಳವಾರ(ಜ.24) ತಮ್ಮ ವಿರುದ್ಧ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಲೋಕಾಯುಕ್ತ ಪೊಲೀಸರು ಕೈಗೊಳ್ಳಬಹುದಾದ ತನಿಖೆಯ ತಡೆ ಕೋರಿ ಹೈ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಸುಪ್ರೀಮ್ ಕೋರ್ಟ್ ನ ಮೊರೆ ಹೋಗಿದ್ದಾರೆ.

1999 ರಿಂದ 2004 ರ ವರೆಗೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ತಮ್ಮ ಅಧಿಕಾರಾವಧಿಯಲ್ಲಿ ಅರಣ್ಯಕ್ಕೆ ಮೀಸಲಾದ ಭೂಮಿಯನ್ನು ಅನಧಿಕೃತ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬುದು ಅವರ ಮೇಲಿರುವ ಆರೋಪ.

ಮಾಜಿ ಮುಖ್ಯ ಮಂತ್ರಿಗಳಾದ ಧರಂ ಸಿಂಗ್ ಹಾಗು ಜೆ.ಡಿ.(ಎಸ್) ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹಾಗು ಇತರ 11 ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತ ಪೊಲೀಸರು ಎಫ್.ಐ. ಆರ್ ದಾಖಲಿಸಿದ್ದಾರೆ.

ಜನವರಿ 20 ರಂದು ತಮ್ಮ ಮೇಲಿನ ಖಾಸಗಿ ದೂರನ್ನು ವಜಾಗೊಳಿಸುವಂತೆ ಕೋರಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾ ಗೊಳಿಸಿದ್ದ ಹೈ ಕೋರ್ಟ್, ಲೋಕಾಯುಕ್ತರು ತನಿಖೆ ಮುಂದುವರಿಸಬಹುದೆಂದು ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Land denotification case: External Affairs Minister SM Krishna on Tuesday, Jan 24 moved the Supreme court against Karnataka High Court's order rejecting to stall the Lokayukta police's probe against him
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X