ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಕಟ್ಟಾಳುಗಳು ರಾಷ್ಟ್ರಧ್ವಜವನ್ನೂ ಬಿಟ್ಟಿಲ್ಲ

By Prasad
|
Google Oneindia Kannada News

ಬೆಂಗಳೂರು, ಜ. 24 : ಕಳೆದ ಐವತ್ತು ವರ್ಷಗಳಿಂದ ಬಸವನಗುಡಿಯ ಗಾಂಧಿ ಬಜಾರಿನಲ್ಲಿ ಹೂ ತರಕಾರಿಗಳನ್ನು ಮಾರಿ ಹೊಟ್ಟೆಹೊರೆಯುತ್ತಿದ್ದ ನೂರಾರು ವರ್ತಕರ ಕನಸುಗಳನ್ನು ಮಾತ್ರ ಬಿಬಿಎಂಪಿ ಛಿದ್ರಗೊಳಿಸಿಲ್ಲ, ಅವರ ಅನ್ನವನ್ನೂ ಕಸಿದುಕೊಂಡಿದೆ.

ರಾತ್ರೋರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಇಡೀ ಗಾಂಧಿ ಬಜಾರಿನಲ್ಲಿನ ಫುಟ್‌ಪಾತ್‌ನಲ್ಲಿದ್ದ ಇದ್ದಬದ್ದದ್ದನ್ನೆಲ್ಲ ಬಿಬಿಎಂಪಿ ಸರ್ವನಾಶ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಕಂಬವೊಂದರ ಮೇಲೆ ಹಾರಾಡುತ್ತಿದ್ದ ರಾಷ್ಟ್ರಧ್ವಜವನ್ನೂ ಬಿಬಿಎಂಪಿ ಕಾರ್ಯಕರ್ತರು ಬಿಟ್ಟಿಲ್ಲ. ಪಳಿಯುಳಿಕೆಗಳ ನಡುವೆ ಹರಿದ ಧ್ವಜ ಟಿವಿಯಲ್ಲಿ ಕಂಡುಬರುತ್ತಿತ್ತು.

ನೋಟೀಸ್ ಕೂಡ ನೀಡದೆ, ವರ್ತಕರಿಗೆ ಹೊಸ ಸ್ಥಳವನ್ನು ಕೂಡ ಒದಗಿಸದೆ, ಅವರ ಅನಿಸಿಕೆಗಳನ್ನು ಕೂಡ ಕೇಳದೆ ಎಲ್ಲ ಒಡೆದುಹಾಕಿದ್ದಾರೆ ಎಂದು ನಾನೂರಕ್ಕು ಹೆಚ್ಚು ವರ್ತಕರು ಸಂಸಾರ ಸಮೇತರಾಗಿ ಬಂದು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. [ಚಿತ್ರಪಟ]

ನಮ್ಮಷ್ಟಕ್ಕೆ ನಾವು ವ್ಯಾಪಾರ ಮಾಡಿಕೊಂಡಿದ್ದೆವು. ಈಗ ನಮ್ಮ ಹೊಟ್ಟೆ ತುಂಬಿಸುವವರು ಯಾರು ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಇದೇ ತರಹದ ಮಾರುಕಟ್ಟೆ ನಗರದ ಅನೇಕ ಪ್ರದೇಶಗಳಲ್ಲಿವೆ. ಅಲ್ಲಿ ಯಾಕೆ ಇಂಥ ಕಾರ್ಯಾಚರಣೆ ನಡೆಸಿಲ್ಲ ಎಂದು ಅವರು ಕೂಗು ಎಬ್ಬಿಸಿದ್ದಾರೆ. ನೋಟೀಸ್ ನೀಡಿದರೆ ಕೋರ್ಟಿನಿಂದ ತಡೆಯಾಜ್ಞೆ ತರುತ್ತಾರೆಂದು ಹೇಳದೆ ಕೇಳದೆ ಹೀಗೆ ಮಾಡುತ್ತಾರೆಂದು ಜನ ಹೇಳುತ್ತಿದ್ದಾರೆ.

English summary
BBMP has destroyed everything which has come their way, including Indian flag on Gandhi Bazaar, Basavanagudi, Bangalore. Footpath vendors are protesting against the BBMP move on the street.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X