ಸಿಂದಗಿ ಪಾಕ್ ಧ್ವಜ:ರಾಮಸೇನೆಗೆ ನಿಷೇಧದ ತೂಗುಕತ್ತಿ
ಬೆಂಗಳೂರು,
ಜ 23: ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿದ ದುಷ್ಕರ್ಮಿಗಳು ಶ್ರೀರಾಮಸೇನೆ ಸಂಘಟನೆಯ ವಿದ್ಯಾರ್ಥಿಗಳು ಎಂಬುದು ಪೊಲೀಸರಿಗೆ ಮನದಟ್ಟಾಗಿದೆ. ಆದ್ದರಿಂದ ಆ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಸರಕಾರ ಗಂಭೀರವಾಗಿ ಆಲೋಚಿಸುತ್ತಿದೆ ಎಂದು ಗೃಹ ಸಚಿವ ಆರ್ ಅಶೋಕ್ ಅವರು ಸೋಮವಾರ ಹೇಳಿದ್ದಾರೆ. id="toptextpromo">ಶ್ರೀರಾಮಸೇನೆ
ಸಂಘಟನೆ ಈ ಹಿಂದೆಯೂ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಆದರೆ ಈ ಬಾರಿ ಸಂಘಟನೆಯನ್ನು ನಿಷೇಧಕ್ಕೊಳಪಡಿಸುವುದು ಖಚಿತ ಎಂದು ಅಶೋಕ್ ಘಂಟಾಘೋಶವಾಗಿ ಹೇಳಿದ್ದಾರೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದರು. ಆದರೆ ನಿಷೇಧದ ಅವಧಿ, ಅದರ ಸ್ವರೂಪಗಳ ಬಗ್ಗೆ ಅಶೋಕ್ ಹೆಚ್ಚಿನ ಮಾಹಿತಿ ನೀಡಲಿಲ್ಲ. id='are-slot-1' class='oiad oi-axt oiadv'> id='top-searched-articles'>ಗಮನಾರ್ಹವೆಂದರೆ
ಹುಣಸೂರು ವಿರ್ದಾರ್ಥಿಗಳ ಅಪಹರಣ ಮತ್ತು ಹತ್ಯೆಯಂತಹ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿದ್ದ KFD ಮತ್ತು PDI ಸಂಘಟನೆಯನ್ನು ನಿಷೇಧಿಸುವ ಬಗ್ಗೆಯೂ ಆರು ತಿಂಗಳ ಹಿಂದೆ ಅಶೋಕ್ ಇದೇ ಮಾತುಗಳನ್ನು ಹೇಳಿದ್ದರು.











Click it and Unblock the Notifications