ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ. 30ಕ್ಕೆ ಯಡಿಯೂರಪ್ಪ ಮತ್ತೆ ಜೈಲುಪಾಲು?

By Srinath
|
Google Oneindia Kannada News

bsy-may-be-summoned-jan30-rachenahalli-denotification
ಬೆಂಗಳೂರು, ಜ.23: ರಾಚೇನಹಳ್ಳಿ ಡಿನೋಟಿಫಿಕೇಷನ್‌ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಮತ್ತೆ ಸಮನ್ಸ್‌ ಭೀತಿ ಎದುರಾಗಿದೆ. 'ಈ ಕೇಸ್‌ನ ಆರೋಪಗಳ ಬಗ್ಗೆ ಲೋಕಾಯುಕ್ತ ಪೊಲೀಸರು ಈಗಾಗಲೇ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ.

ಹೀಗಿರುವಾಗ, ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ವಿಚಾರಣೆಗೆ ಸಮನ್ಸ್‌ ಜಾರಿಗೊಳಿಸಬೇಕು' ಎಂದು ಬಾಷಾ ಪರ ವಕೀಲ ನಿತಿನ್ ಲೋಕಾಯುಕ್ತ ಕೋರ್ಟಿನಲ್ಲಿ ವಾದ ಮಂಡಿಸಿದ್ದಾರೆ.

ವಕೀಲ ಸಿರಾಜಿನ್‌ ಬಾಷಾ ಅವರು ರಾಚೇನಹಳ್ಳಿಯಲ್ಲಿ ಅಕ್ರಮ ಡಿನೋಟಿಫಿಕೇಷನ್‌ ಬಗ್ಗೆ ನೀಡಿರುವ ಈ ದೂರಿನಲ್ಲಿ ಆರೋಪಿಗಳಿಗೆ ಸಮನ್ಸ್‌ ಜಾರಿಗೊಳಿಸುವ ಬಗ್ಗೆ ಲೋಕಾಯುಕ್ತ ಕೋರ್ಟ್‌ ಜ.30ಕ್ಕೆ ಆದೇಶ ನೀಡಲಿದೆ.

ಒಂದುವೇಳೆ, ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದರೆ, ಯಡಿಯೂರಪ್ಪ ಮತ್ತೆ ನ್ಯಾಯಾಲಯದ ಕಟಕಟೆಗೆ ಹಾಜರಾಗಬೇಕಾಗುತ್ತದೆ. ರಾಚೇನಹಳ್ಳಿಯಲ್ಲಿ ಯಡಿಯೂರಪ್ಪ ಮತ್ತು ಪುತ್ರರು, ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಡಿನೋಟಿಫೈ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

ಈ ಪ್ರಕರಣದ ವಿಚಾರಣೆ ಕಳೆದ ಶನಿವಾರ ನಡೆಯಿತು. ಆ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ವರದಿಯಲ್ಲಿ ಸಲ್ಲಿಸಿರುವ ದಾಖಲೆಗಳಲ್ಲೇ ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳಿವೆ ಎಂದು ನಿತಿನ್ ವಾದಿಸಿದರು. ಆದರೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್ ಕೆ ಸುಧೀಂದ್ರ ರಾವ್ ಅವರು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಬೇಕೇ, ಇಲ್ಲವೇ ಎಂಬುದರ ಬಗ್ಗೆ 30ರಂದು ಆದೇಶ ಪ್ರಕಟಿಸುವುದಾಗಿ ಹೇಳಿದರು.

English summary
BS Yeddyurappa may be summoned on Jan 30 Rachenahalli denotification case. A BDA land in Rachenahalli was denotified in favour of Health Zone Advisors Pvt Ltd but later land went to the family of Yeddyurappa. Denotification of 1.12 acres in survey number 55/2 of Rachenalli, Bangalore, for the benefit of Yeddyurappa’s children, son-in-law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X