ಬೆಂಗಳೂರು ಪ್ರಿನ್ಸಿಯಿಂದ ಲೈಂಗಿಕ ಕಿರುಕುಳ

Trio School Principal Paul
ಬೆಂಗಳೂರು, ಜ.22: ವಿಶಿಷ್ಟ ರೀತಿಯಲ್ಲಿ ಮಕ್ಕಳ ಕೌಶಲ್ಯ ಅಭಿವೃದ್ಧಿ, ಹಬ್ಬ, ಸಾಂಸ್ಕೃತಿಕ ಆಚರಣೆಗೆ ಹೆಸರಾಗಿದ್ದ ಟ್ರಿಯೋ ಇಂಟರ್ ನ್ಯಾಷನಲ್ ಶಾಲೆ ಈಗ ತಲೆ ತಗ್ಗಿಸುವಂತಾಗಿದೆ. ಶಾಲೆ ಪ್ರಿನ್ಸಿಪಾಲ್ ಪಾಲ್ ಮಿಕ್ಕೆನ್ ಅವರನ್ನು ಮಕ್ಕಳ ಮೇಲೆ ದೌರ್ಜರ್ನ್ಯ ಎಸೆಗಿದ ಆರೋಪ ಹೊರೆಸಲಾಗಿದೆ.

ಯುಕೆ ಮೂಲದ ಪ್ರಿನ್ಸಿಪಾಲ್ 37 ವರ್ಷದ ಪಾಲ್ ಬಂಧನದಿಂದ ಸಹದ್ಯೋಗಿಗಳು ಆಘಾತಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಯೊಬ್ಬನನ್ನು ತನ್ನ ಕಚೇರಿಗೆ ಕರೆಸಿಕೊಂಡು ಅಸಭ್ಯವಾಗಿ ವರ್ತಿಸಿ, ಅಶ್ಲೀಲಪದಗಳಿಂದ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗಿದೆ.

ಪೋಷಕರೊಬ್ಬರಿಂದ ದೂರು ಬಂದಿತ್ತು. ಅದನ್ನು ಪರಿಶೀಲಿಸಿ ವಿಚಾರಣೆಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೂರ್ವ ವಲಯದ ಜಂಟಿ ಆಯುಕ್ತ ಬಿ ದಯಾನಂದ ಹೇಳಿದ್ದಾರೆ.

ಶಾಲೆಯ ಮಕ್ಕಳು ಹಾಗೂ ಶಿಕ್ಷಕ ವೃಂದ ಫೇಸ್ ಬುಕ್ ನಲ್ಲಿ ಖಾತೆ ತೆರೆಯುವುದನ್ನು ಕಡ್ಡಾಯಗೊಳಿದ ಪ್ರಥಮ ಶಾಲೆ ಎಂಬ ಕೀರ್ತಿಯೂ ಟ್ರಿಯೋ ಶಾಲೆಗೆ ಸಲ್ಲುತ್ತದೆ.

ಪ್ರಕರಣದ ಸತ್ಯಾಸತ್ಯತೆ ಹೊರಬಿದ್ದ ನಂತರ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಾಲೆಯ ವ್ಯವಸ್ಥಾಪಕರು ಹೇಳಿದ್ದಾರೆ. ಈ ಮುಂಚೆವಿಎಸ್ ರಾಥೋಡ್ ಎಂಬ ಶಿಕ್ಷಕರೊಬ್ಬರು 10ನೇ ತರಗತಿ ವಿದ್ಯಾರ್ಥಿನಿಯರ ಮೇಲೆ ಕಿರುಕುಳ ನೀಡಿದ್ದ ಘಟನೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+