ಸಿಟಿ ರವಿಗೆ ಮುಖಭಂಗ, ಟಿಕೇಟ್ ನೀಡದ ಬಿಜೆಪಿ

ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಸದ್ಯಕ್ಕೆ ಆಯ್ಕೆ ಮಾಡಿರುವ ಹೆಸರುಗಳಲ್ಲಿ ಸಿಟಿ ರವಿ ಹೆಸರು ಸೇರಿಸಲಾಗಿಲ್ಲ. ಅಂತಿಮವಾಗಿ ಸ್ಪರ್ಧಿಸಲಿರುವ ಅಭ್ಯರ್ಥಿಯ ಆಯ್ಕೆ ಕೋರ್ ಕಮಿಟಿಗೆ ಸೇರಿದ್ದು ಎಂದು ಈಶ್ವರಪ್ಪ ಹೇಳಿದ್ದಾರೆ.
ಉಡುಪಿ ಜಿಲ್ಲೆಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಸುನೀಲ್ ಕುಮಾರ್ ಕಾರ್ಕಳ, ಚಿಕ್ಕಮಗಳೂರು ಜಿಲ್ಲೆಯಿಂದ ಪ್ರಾಣೇಶ್, ಕೇಶವ್ ಹೆಸರನ್ನು ಶಿಫಾರಸು ಮಾಡಲಾಗಿದೆ.
ಪಕ್ಷದ ಪ್ರಮುಖರೊಡನೆ ಚರ್ಚಿಸಿ ನಂತರ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು. ಆದರೆ, ಅತ್ತ ಸಂಪುಟದಲ್ಲಿ ಸ್ಥಾನ, ಇತ್ತ ಸಂಸದ ಸ್ಥಾನಕ್ಕೆ ಟಿಕೆಟ್ ಕೂಡಾ ಸಿಗದೆ ಅತೃಪ್ತ ಆತ್ಮವಾಗಿರುವ ಸಿಟಿ ರವಿ ಬಗ್ಗೆ ಈಶ್ವರಪ್ಪ ಯಾವುದೇ ಚಕಾರ ಎತ್ತಲಿಲ್ಲ.












Click it and Unblock the Notifications