ವಕೀಲರ ವಿರುದ್ಧ ಕ್ರಿಮಿನಲ್ ಕೇಸ್; ಪೇದೆ ಬಚಾವ್

ಇದೇ ಸಂದರ್ಭದಲ್ಲಿ ವಕೀಲರಿಂದ ಹಲ್ಲೆಗೊಳಗಾದ ಪೇದೆ ಅರುಣ್ ಅವರನ್ನು ಅಮಾನತುಗೊಳಿಸಿಲ್ಲ ಎಂದು ಬಿದರಿ ತಿಳಿಸಿದ್ದಾರೆ.
ವಕೀಲರ ಟ್ರಾಫಿಕ್ ಜಾಮ್ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಅವರು ಸಲ್ಲಿಸಿರುವ 20 ಪುಟಗಳ ಸುದೀರ್ಘ ವರದಿಯನ್ನು ಸ್ವೀಕರಿಸಿ, ಮಾತನಾಡಿದ ಬಿದರಿ ಇನ್ಮುಂದೆ ಯಾರಿಗೇ ಆಗಲಿ ಈ ರೀತಿ ಪುಂಡಾಟಿಕೆ ನಡೆಸಲು ಬಿಡುವುದಿಲ್ಲ. ಇದು ಗುರುತರ ಅಪರಾಧ.
5 ನಿಮಿಷಕ್ಕಿಂತ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಮಾಡಲು ಯಾವುದೇ ವ್ಯಕ್ತಿ-ಶಕ್ತಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿದರಿ ಹೇಳಿದ್ದಾರೆ.
'ಎಲ್ಲದಕ್ಕೂ ಒಂದು ಮಿತಿ ಇದೆ. ಕಾನೂನು ಹಿಡಿತದಿಂದ ಪಾರಾಗಬಹುದು ಎಂಬ ಭ್ರಮೆ ಬೇಡ' ಎಂದೂ ಬಿದರಿ ನಗಾರಿ ಬಾರಿಸಿದ್ದಾರೆ.












Click it and Unblock the Notifications