ವಕೀಲರ 'ಕೊಲವೆರಿ'ಯಿಂದ ವಿಮಾನ ತಪ್ಪಿಹೋಯ್ತು

ಸುಮಾರು 6 ಗಂಟೆಗಳಿಗೂ ಅಧಿಕ ಕಾಲ ನಡೆದ ಈ ಉದ್ವಿಗ್ನ ಪ್ರತಿಭಟನೆಯಿಂದಾಗಿ ಪ್ರಯಾಣಿಕರನ್ನು ಹೊತ್ತಿದ್ದ ಅನೇಕ ಏರ್ ಪೋರ್ಟ್ ಟ್ಯಾಕ್ಸಿಗಳು ನಿಂತಲ್ಲೇ ನಿಲ್ಲಬೇಕಾಯಿತು.
ಉದ್ಯಮಿಗಳಿಗೆ ನಷ್ಟ: ನವದೆಹಲಿಗೆ ವ್ಯಾಪಾರ ಸಂಬಂಧಿತ ಪ್ರವಾಸಕ್ಕೆ ಫ್ಲೈಟ್ ಬುಕ್ ಮಾಡಿದ್ದ ರಾಜಶೇಖರ್, ಎರಡು ಗಂಟೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಕೊಂಡ ಪರಿಣಾಮ ವಿಮಾನ ತಪ್ಪಿಸಿಕೊಂಡಿದ್ದಾರೆ.
ಅನಿರೀಕ್ಷಿತ ಪ್ರತಿಭಟನೆಯಿಂದಾಗಿ ಸಾರ್ವಜನಿಕರಲ್ಲಿ ಅನೇಕರಿಗೆ ಏನು ಮಾಡಬೇಕು ಎಂಬುದು ತಿಳಿಯದೇ ಮಾನಸಿಕ ಹಿಂಸೆ ಅನುಭವಿಸಿದ್ದಾರೆ. ಪ್ರತಿಭಟನೆ ಹತ್ತಿಕ್ಕುವಲ್ಲಿ ವಿಫಲವಾದ ಪೊಲೀಸ್ ಇಲಾಖೆ ಮೇಲೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ವಿಶಾದ ವ್ಯಕ್ತಪಡಿಸಿರುವ ಮ್ಯಾಕ್ಸಿ ಕ್ಯಾಬ್ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸುಮಾರು 100ಕ್ಕೂ ಅಧಿಕ ಕ್ಯಾಬ್ ಗಳು ಮೈಸೂರು ಬ್ಯಾಂಕ್ ವೃತ್ತದ ಟ್ರಾಫಿಕ್ ಜಾಮ್ ಗೆ ಬಲಿಯಾಗಿದೆ.
ಉದ್ಯಮಿಗಳು, ಎನ್ನಾರೈಗಳು ವಿಮಾನ ಏರುವ ತವಕದಲ್ಲಿದವರು ಪ್ರತಿಭಟನೆ ನೋಡಿ ತಣ್ಣಗಾಗಿದ್ದರು. ಕ್ಯಾಬ್ ಮಾತ್ರವಲ್ಲದೆ ವಾಯುವಜ್ರ ಬಿಎಂಟಿಸಿ ಬಸ್ ಕೂಡಾ ವಿಮಾನ ನಿಲ್ದಾಣಕ್ಕೆ ಸರಿಯಾದ ವೇಳೆಗೆ ತಲುಪಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಸುಮಾರು ನಾಲ್ಕು ವಾಯುವಜ್ರ ಬಸ್ ಜನ ತಡವಾಗಿ ಬಂದರೂ ವಿಮಾನ ನಿಲ್ದಾಣ ಅಧಿಕಾರಿಗಳು ಬದಲಿ ವ್ಯವಸ್ಥೆಗೆ ಮನಸ್ಸು ಮಾಡಿಲ್ಲ, ಪ್ರತಿಭಟನೆಗಾಗಿ ವಿಮಾನಯಾನ ವೇಳಾಪಟ್ಟಿ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದ ಘಟನೆ ನಡೆದಿದೆ.












Click it and Unblock the Notifications