ಮೇ ತಿಂಗಳಲ್ಲಿ ಫೇಸ್ ಬುಕ್ ಷೇರುಪೇಟೆಗೆ ಎಂಟ್ರಿ?

ಈ ಸುದ್ದಿ ನಿಜ ಎನ್ನುವುದಾದರೆ ಮುಂದಿನ ತಿಂಗಳ ಆರಂಭಕ್ಕೂ ಮುನ್ನವೇ ಐಪಿಒ ದಾಖಲಾತಿಗಳನ್ನು ಸಲ್ಲಿಸಬೇಕು. Securities and Exchange Commission ಜಾರಿಗೆ ಮೂರ್ನಾಲ್ಕು ತಿಂಗಳಾದರೂ ಹಿಡಿಯುತ್ತದೆ.
ನಿರೀಕ್ಷೆಯಂತೆ ಫೇಸ್ ಬುಕ್ ಐಪಿಒ ಅತಿದೊಡ್ಡ ಪ್ರಮಾಣದ್ದಾಗಿರುತ್ತದೆ. 10 ಬಿಲಿಯನ್ ಡಾಲರ್ ನಿಂದ 100 ಬಿಲಿಯನ್ ಡಾಲರ್ ತನಕ ಮೌಲ್ಯ ಏರಿಕೆ ಕಾಣುವ ಸಂಭವವಿದೆ.
ಸುಮಾರು 800 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ಪ್ರಸಕ್ತ ವರ್ಷದಲ್ಲಿ 1 ಬಿಲಿಯನ್ ದಾಟುವ ಸಾಧ್ಯತೆಯಿದೆ. 2011ರಲ್ಲಿ ಸುಮಾರು 4 ಬಿಲಿಯನ್ ಡಾಲರ್ ಆದಾಯ ದಾಖಲಿಸಿದ್ದ ಫೇಸ್ ಬುಕ್, 2012ರಲ್ಲಿ ಇನ್ನೂ ಅಧಿಕ ಆದಾಯದ ನಿರೀಕ್ಷೆಯಲ್ಲಿದೆ. ಆದರೆ, ಈ ಬಗ್ಗೆ ಫೇಸ್ ಬುಕ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.












Click it and Unblock the Notifications