ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ ಪಿಜಿ ಟ್ರಕ್ ಮುಷ್ಕರ: ತಾಜಾ ಸುದ್ದಿ ಏನು?

By Srinath
|
Google Oneindia Kannada News

lpg-truckers-strike-customers-at-receiving-end
ಬೆಂಗಳೂರು, ಜ.17: ಕೊಯ್ಲು ಹಬ್ಬದ ಸಂದರ್ಭದಲ್ಲಿ ನಾಡಿನ ಮನೆ ಮನೆಯ ಅಂಗಳದಲ್ಲಿ ಸಂಕ್ರಾಂತಿ ಬಾಂಬ್ ಎಸೆದಿರುವ ಅಡುಗೆ ಅನಿಲ ಕಂಪನಿಗಳು ಮತ್ತು ದಕ್ಷಿಣ ಭಾರತದ ಅನಿಲ ಸರಬರಾಜು ಟ್ರಕ್ ಮಾಲೀಕರು ಇನ್ನೂ ಆಟವಾಡುತ್ತಲೇ ಇದ್ದಾರೆ. ಯಾರು ಮೊದಲು ಕಣ್ಣು ಮಿಟುಕಿಸುತ್ತಾರೋ ಅವರು ಸೋತಂತೆ ಎಂಬ ಭೀತಿಯಿಂದ ಈ ಎರಡೂ ಕಡೆಯವರ ದೃಷ್ಟಿಯುದ್ಧ ಇನ್ನೂ ಮುಂದುವರಿದಿದೆ.

ಟ್ಯಾಂಕರ್ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದೆ. ಎಲ್‌ಪಿಜೆ ಪೂರೈಕೆಯಾಗದೆ ಗೃಹಿಣಿಯರು ಗೋಳಾಡುತ್ತಿದ್ದಾರೆ. ಹಬ್ಬ ಮುಗಿಯುತ್ತಿದ್ದಂತೆ ಗ್ರಾಹಕರು ಗ್ಯಾಸ್‌ ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಈ ಹಿಂದೆ, ಅಂದರೆ ವಾರಕ್ಕೆ ಮುಂಚೆ ಬುಕ್ ಮಾಡಿದವರಿಗೆ ಮಾತ್ರ ಅದೂ ನೋಡಿಕೊಂಡು ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ. ಇನ್ನು ಈಗ ಬುಕ್ ಮಾಡುವವರಿಗೆ ಸದ್ಯಕ್ಕಂತೂ ಸಿಲಿಂಡರ್ ಸಿಗುವುದು ಮರೀಚಿಕೆಯೇ.

ಆದರೆ ಇಂಡೇನ್‌, ಭಾರತ್‌ ಮತ್ತು ಎಚ್‌ಪಿ ಕಂಪನಿಗಳು ಮಾತ್ರ ಗ್ರಾಹಕರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ವಾದಿಸುತ್ತಿವೆ. ವಾಸ್ತವದಲ್ಲಿ ಎಲ್ಲ ಅಡುಗೆ ಅನಿಲ ಮಾರಾಟ ಕಂಪನಿಗಳು ಸಂಕಷ್ಟದಲ್ಲಿದ್ದು, ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಸಿಲಿಂಡರ್ ಸರಬರಾಜು ಮಾಡಲು ಹೆಣಗಾಡುತ್ತಿವೆ.

ಇನ್ನೂ ಕರೆ ಬಂದಿಲ್ಲ !: 'ತೈಲ ಕಂಪನಿಗಳು ಇನ್ನು ಕೂಡ ನಮ್ಮನ್ನು ಮಾತುಕತೆಗೆ ಕರೆದಿಲ್ಲ. ಇದು ಗ್ರಾಹಕರ ಬಗ್ಗೆ ಕಂಪನಿಗೆ ಇರುವ ಕಾಳಜಿ ತೋರಿಸುತ್ತದೆ. ಆದರೆ, ಬೇಡಿಕೆ ಈಡೇರುವ ತನಕ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ. ಬುಧವಾರದಿಂದ ನಮ್ಮ ಮುಷ್ಕರದ ತೀವ್ರತೆ ಮತ್ತಷ್ಟು ಜೋರಾಗಲಿದೆ' ಎಂದು ಲಾರಿ ಮಾಲೀಕರ ಸಂಘದ ಜಿ.ಆರ್‌. ಷಣ್ಮುಗಪ್ಪ ಹೇಳಿದ್ದಾರೆ.

English summary
LPG transporters are on indefinite strike. It has hit gas cylinder supply severely. But neither the Southern Region Bulk LPG Transport Lorry Owners Association nor gas companies bothered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X