ಸೋಮಣ್ಣ, ಯಡಿಯೂರಪ್ಪಗೆ ಜಾಮೀನು ಮಂಜೂರು

ಈ ಮುಂಚೆ ರವಿಕೃಷ್ಣಾ ರೆಡ್ಡಿ ಎಂಬುವರು ಖಾಸಗಿ ದೂರನ್ನು ಸಲ್ಲಿಸಿದ್ದರು. ಲೋಕಾಯುಕ್ತ ವಿಶೇಷ ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್ ಅವರು ಶೈಲಜಾ ಸೋಮಣ್ಣ, ವಿ. ಸೋಮಣ್ಣ ಹಾಗೂ ಯಡಿಯೂರಪ್ಪ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದರು.
ಲೋಕಾಯುಕ್ತ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೂವರು ಆರೋಪಿಗಳು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ಮಂಗಳವಾರ ನಡೆದು, ಮೂವರಿಗೂ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
2 ಲಕ್ಷ ಬಾಂಡ್ ಸಲ್ಲಿಕೆ, ಇಬ್ಬರ ಶ್ಯೂರಿಟಿ ನೀಡಬೇಕು ಹಾಗೂ ಸಾಕ್ಷ್ಯ ನಾಶಪಡಿಸಬಾರದು ಎಂದು ಎಚ್ಚರಿಕೆ ನೀಡಿ ಹೈಕೋರ್ಟ್ ಏಕಸದಸ್ಯಪೀಠ ಜಾಮೀನು ಮಂಜೂರು ಮಾಡಿದೆ.
1993ರಲ್ಲಿ ಬಿಡಿಎ ಸ್ವಾದೀನಪಡಿಸಿಕೊಂಡಿದ್ದ ಜಮೀನನ್ನು 2005ರಲ್ಲಿ ಸೋಮಣ್ಣ ಅವರು ತಮ್ಮ ಪತ್ನಿ ಶೈಲಜಾ ಹೆಸರಿನಲ್ಲಿ ನಾಗದೇವನಹಳ್ಳಿಯಲ್ಲಿ 22 ಗುಂಟೆ ಎಕರೆ ಜಮೀನು ಖರೀದಿಸಿದ್ದರು. ವಿವಿಎಸ್ ಶಿಕ್ಷಣ ಟ್ರಸ್ಟ್ ಹೆಸರಿನಲ್ಲಿ ಪಡೆದ ಈ ಭೂಮಿಯನ್ನು 2009ರಲ್ಲಿ ಅಕ್ರಮವಾಗಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಕ್ರಮವಾಗಿ ಡಿನೋಟಿಫೈ ಮಾಡಿದ್ದರು.












Click it and Unblock the Notifications