ಮತದಾರರಿಗೆ ಮಾಯಾಬೂದಿ:ಭ್ರಷ್ಭ ಶಾಸಕರಿಗೂ ಕೊಕ್
ಲಖ್ನೊ,ಜ.17:
ಚುನಾವಣೆ ಕಾಲೇ... ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಕಾರ್ಯಕ್ರಮ ಮುಂದುವರಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಭ್ರಷ್ಟಾತಿಭ್ರಷ್ಟ ಸಚಿವರನ್ನು ಓಡಿಸಿದ ಬಳಿಕ ಇದೀಗ ಅನೇಕ ಶಾಸಕರಿಗೂ ಗೇಟ್ ಪಾಸ್ ನೀಡಲಾರಂಭಿಸಿದ್ದಾರೆ. ತನ್ಮೂಲಕ ಮತದಾರರ ಮೇಲೆ ಮಂಕುಬೂದಿ ಎರಚುವ ಕಾಯಕದಲ್ಲಿ ತೊಡಗಿದ್ದಾರೆ. ಆದರೆ ಮತದಾರ ಪ್ರಭು ಎಷ್ಟರ ಮಟ್ಟಿಗೆ ಮರುಳಾಗುತ್ತಾನೋ, ಗೊತ್ತಿಲ್ಲ. id="toptextpromo">ಉತ್ತರ
ಪ್ರದೇಶ ವಿಧಾನಸಭೆ ಚುನಾವಣೆ ಮುನ್ನೆಲೆಯಲ್ಲಿ ಒಂದು ಕಡೆಯಿಂದ ಕಾಂಗ್ರೆಸ್ ಆದಿಯಾಗಿ ಪ್ರತಿಪಕ್ಷಗಳು ಒಂದೇ ಸಮನೆ ಮಾಯಾವತಿ ದುರಾಡಳಿತದ ವಿರುದ್ಧ ಭಾರಿ ಪ್ರಚಾರದಲ್ಲಿ ತೊಡಗಿವೆ. ಇದರಿಂದ ದಿಕ್ಕೆಟ್ಟವರಂತೆ ಮಾಯಾವತಿ, ತಮ್ಮ ಪಕ್ಷದ ಅರ್ಧದಷ್ಟು ಶಾಸಕರಿಗೆ ಚುನಾವಣೆ ಟಿಕೆಟ್ ನೀಡದಿರಲು ನಿರ್ಧರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸುಮಾರು
100ಕ್ಕೂ ಹೆಚ್ಚು ಶಾಸಕರು, ಸಚಿವರಿಗೆ ಮಾಯಾ ಭಾನುವಾರ ಗೇಟ್ ಪಾಸ್ ನೀಡಿ, ಕಣದಿಂದ ಹೊರಕ್ಕಟ್ಟಿದ್ದಾರೆ. ಇವರೆಲ್ಲ 2007 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಯಾರ ಬಿಎಸ್ಪಿ ಪಕ್ಷವನ್ನು ಅಪ್ಪಿಕೊಂಡಿದ್ದ ಕಲಿಗಳು.











Click it and Unblock the Notifications