ಟೈಮ್ಸ್ ಗ್ರೂಪ್ ತೆಕ್ಕೆಗೆ ಟಿವಿ9

times-group-may-buy-tv9-nimbus-sports-channels
ಬೆಂಗಳೂರು, ಜ.17: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಭರ್ಜರಿ ಟಿಆರ್ ಪಿ ರೇಟಿಂಗ್ ಮೂಲಕ ಅಗ್ರ ಸ್ಥಾನದಲ್ಲಿರುವ TV9 ವಾಹಿನಿಯನ್ನು ಖರೀದಿಸಲು ಬೆನೆಟ್, ಕೋಲ್ ಮನ್ ಅಂಡ್ ಕಂಪನಿ (ಅಂದರೆ BCCL- ಟೈಮ್ಸ್ ಗ್ರೂಪ್) ಮುಂದಾಗಿದೆ. ಜತೆಗೆ, ನಿಯೊ ಕ್ರಿಕೆಟ್ ಮತ್ತು ನಿಯೋ ಸ್ಪೋರ್ಟ್ಸ್ ಚಾನೆಲುಗಳಲ್ಲೂ ಪಾಲುದಾರಿಕೆ ಹೊಂದಲು ಟೈಮ್ಸ್ ಗ್ರೂಪ್ ಸಜ್ಜಾಗಿದೆ.

TV9 ವಾಹಿನಿಯ ಹೂಡಿಕೆದಾರ ಶ್ರೀನಿ ರಾಜು (ಚಲಪತಿ ಶ್ರೀನಿವಾಸರಾಜು) ತಮ್ಮ TV9 ಸಮೂಹ ವಾಹಿನಿಗಳನ್ನು 1 ವರ್ಷದ ಹಿಂದೆಯೇ ಮಾರಾಟಕ್ಕೆ ಇಟ್ಟಿದ್ದರು. ಈ ನಿಟ್ಟಿನಲ್ಲಿ ಸೂಕ್ತ ಖರೀದಿದಾರರ ಹುಡುಕಾಟಕ್ಕಾಗಿ ಎಡೆಲ್ವೀಸ್ ಹೂಡಿಕೆ ಬ್ಯಾಂಕ್ ಅನ್ನು ನೇಮಿಸಿದ್ದರು. ಎಲ್ಲವೂ ಸುಸುತ್ರವಾಗಿ ನಡೆದರೆ ಇನ್ನೊಂದು ವರ್ಷದಲ್ಲಿ TV9 ಸಮೂಹ ವಾಹಿನಿಗಳು BCCL ಕಂಪನಿಯ ಅಧಿನಕ್ಕೆ ಬರಲಿವೆ.

ಮುಖ್ಯವಾಗಿ, TV9 ವಾಹಿನಿಯ ಮಾತೃಸಂಸ್ಥೆಯಾದ ಹೈದರಾಬಾದ್ ನೆಲೆಯ ಅಸೋಸಿಯೇಟೆಡ್ ಬ್ರಾಡ್ ಕಾಸ್ಟಿಂಗ್ ಕಂಪನಿ ಲಿಮಿಟೆಡ್ (ABCL) ಕಂಪನಿಯನ್ನು ಸಂಪೂರ್ಣವಾಗಿ ಖರೀದಿಸುವ ಇರಾದೆಯೊಂದಿಗೆ ಟೈಮ್ಸ್ ಗ್ರೂಪ್ ಕಣಕ್ಕೆ ಇಳಿದಿದೆ.

ಇನ್ನು, ನಿಯೊ ಕ್ರಿಕೆಟ್ ಮತ್ತು ನಿಯೋ ಸ್ಪೋರ್ಟ್ಸ್ ಚಾನೆಲುಗಳು 34 ರಾಷ್ಟ್ರಗಳಿಗೆ ಕ್ರೀಡಾಕೂಟಗಳ ಪ್ರಸಾರ ಭಾಗ್ಯ ಕಲ್ಪಿಸುತ್ತಿವೆ. 1,200 ಜಾಹೀರಾತುದಾರರನ್ನು ಭದ್ರವಾಗಿಸಿಕೊಂಡಿದೆ. 2010-11 ಸಾಲಿನಲ್ಲಿ ನಿಯೊ 425 ಕೋಟಿ ರು. ಆದಾಯ ಗಳಿಸಿತಾದರೂ 6 ಕೋಟಿ ರು ನಷ್ಟವನ್ನೂ ಹೊಂದಿತ್ತು. ಆದರೆ, BCCL ಕಳೆದ ವರ್ಷ 5,000 ಕೋಟಿ ರು. ವಹಿವಾಟು ನಡೆಸಿದೆ. ಅದರಲ್ಲಿ 1,200 ಕೋಟಿ ರು. ಲಾಭ ಗಳಿಸಿದೆ.

ಈ ಮಧ್ಯೆ, ಈನಾಡು ಚಾನಲುಗಳ ಖರೀದಿಗಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನೆಟ್ ವರ್ಕ್ 18 ಕಂಪನಿಗಳು ಮಾತುಕತೆಯನ್ನು ಬಹುತೇಕ ಪೂರ್ಣಗೊಳಿಸಿರುವುದು ಗಮನಾರ್ಹ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+