ಯಡಿಯೂರಪ್ಪ ರಾಜ್ಯ ಪ್ರವಾಸ ಏಕೆ, ಯಾವನಿಗ್ಗೊತ್ತು?

ಪಕ್ಷ ಸಂಘಟನೆಗಾಗಿ ಯಡಿಯೂರಪ್ಪ ಕೈಗೊಂಡಿರುವ ರಾಜ್ಯ ಪ್ರವಾಸದಲ್ಲಿ ಕೆಎಸ್ ಈಶ್ವರಪ್ಪ, ಸದಾನಂದ ಗೌಡ ಅವರೂ ಕೂಡಾ ಪಾಲ್ಗೊಳ್ಳಲಿರುವುದು ಕುತೂಹಲ ಕೆರಳಿಸಿದೆ.
ಗುಲ್ಬರ್ಗಾದಿಂದ ಜ.16ರಂದು ಆರಂಭವಾಗಲಿರುವ ಪ್ರವಾಸದ ಗುರಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ. ಎರಡು ಮೂರು ದಿನಗಳಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆಯಾಗಲಿದೆ. ಪ್ರಚಾರಕ್ಕೆ ಸಿದ್ಧತೆ ನಡೆಸಬೇಕಿದೆ ಎಂದು ಯಡಿಯೂರಪ್ಪ ಹುರುಪಿನಿಂದ ಹೇಳಿದರು.
ಆದರೆ, ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ಉದ್ದೇಶವೇನು? ..ಕಾದುನೋಡಬೇಕಿದೆ.












Click it and Unblock the Notifications