ರಾಜ್ಯದಲ್ಲಿ ಪ್ರತಿಪಕ್ಷಗಳೇ ಇಲ್ಲ, ಯಡ್ಡಿ ಕೊರಗು

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಹೆಸರಿಗೆ ಮಾತ್ರ ಇದೆ. ಬಿಜೆಪಿ ಸಮಕ್ಕೆ ನಿಲ್ಲಬಲ್ಲ, ನಮ್ಮ ತಪ್ಪು ಒಪ್ಪುಗಳನ್ನು ಸಮರ್ಥವಾಗಿ ತಿಳಿಸಬಲ್ಲ ಸಮರ್ಥ ವಿಪಕ್ಷ ಕಾಣಿಸುತ್ತಿಲ್ಲ ಎಂದು ತಮ್ಮ ಮೊದಲ ದಿನದ ಪ್ರವಾಸ ಭಾಷಣದಲ್ಲಿ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ನನ್ನನ್ನು ಕೆಳಗಿಳಿಸಿದ ನಂತರ ಜನರಿಗೆ ವಿಪಕ್ಷಗಳು ಮಾಡಿದ ಕುತಂತ್ರದ ಅರಿವಾಗಿದೆ. ಜನರು ಈಗ ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಮುಂಬರುವ ಚುನಾವಣೆಯಲ್ಲಿ 22 ರಿಂದ 24 ಲೋಕಸಭಾ ಸ್ಥಾನ ಹಾಗೂ 150 ಶಾಸಕರ ಸ್ಥಾನ ಹೊಂದುವುದು ಬಿಜೆಪಿಯ ಏಕೈಕ ಗುರಿಯಾಗಿದೆ. ನಮ್ಮಲ್ಲಿ ಈಗ ಯಾವುದೇ ಬಿಕ್ಕಟ್ಟು ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಬಲವರ್ಧನೆಗೆ ದುಡಿಯುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications