ಬಕೇಟಿನಲ್ಲಿ ಮುಳುಗಿ ಏಳು ತಿಂಗಳ ಹಸುಳೆ ದಾರುಣ ಸಾವು

ಮೃತ ಮಗುವನ್ನು ಪದ್ಮಶ್ರೀ ಎಂದು ಗುರುತಿಸಲಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿರುವ ಕೆ. ಅರುಣ್ ಕುಮಾರ್ ಮತ್ತು ಗೃಹಿಣಿ ಅಂಜಲಿ ಅವರ ಮುದ್ದಿನ ಮಗಳು. ಕಂದಮ್ಮನನ್ನು ಉಳಿಸಿಕೊಳ್ಳಲು ಪಾಲಕರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ಸಾಧ್ಯವಾಗಿಲ್ಲ.
ಆ ಕರಾಳ ದಿನ ಮಗು ಅಮ್ಮನನ್ನು ಮನೆಯಲ್ಲೆಲ್ಲ ಹುಡುಕಿದೆ. ಕಾಣದಿದ್ದಾಗ ಅಂಬೆಗಾಲಿಡುತ್ತ ಹಿತ್ತಲಲ್ಲಿ ಪದ್ಮಶ್ರೀ ಬಂದಿದ್ದಾಳೆ. ಎಲ್ಲ ಮಕ್ಕಳಂತೆ ಅಲ್ಲಿ ನೀರು ತುಂಬಿದ್ದ ದೊಡ್ಡ ಬಕೇಟನ್ನು ಹಿಡಿದು ಆಟವಾಡಲು ಶುರುಮಾಡಿದ್ದಾಳೆ. ಅದರ ಬಳಿ ಹೋಗಬೇಡವೆಂದು ಗದರಿಸಿದರೂ ಆಟ ಮುಂದುವರಿದಿದೆ.
ಆಡಾಡುತ್ತಲೇ ಪದ್ಮಶ್ರೀ ಬಕೇಟಲ್ಲಿ ಬಿದ್ದುಬಿಟ್ಟಿದ್ದಾಳೆ. ಕೂಡಲೆ ಬಂದು ಅವಳನ್ನು ಎತ್ತಿದರೂ ಉಸಿರಾಟದ ತೊಂದರೆಯಾಗಿ ಮಗು ಪ್ರಜ್ಞೆ ತಪ್ಪಿದೆ. ಹತ್ತಿರದ ಖಾಸಗಿ ಆಸ್ಪತ್ರೆಗೆ ಪದ್ಮಶ್ರೀಯನ್ನು ದಾಖಲಿಸಿದ್ದಾರೆ. ಅಲ್ಲಿ ಯಾವುದೇ ಪ್ರಯೋಜನವಾಗದಿದ್ದಾಗ ಹತ್ತು ಕಿ.ಮೀ. ದೂರದ ಇನ್ನೊಂದು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ.












Click it and Unblock the Notifications