ರೇವಣ್ಣನನ್ನ ಡಿಸಿಎಂ ಮಾಡ್ತಾರಂತೆ ಈಶ್ವರಪ್ಪ!

ಯಡಿಯೂರಪ್ಪ ಅವರನ್ನು ಪಂಚ ರಾಜ್ಯಗಳ ಚುನಾವಣೆ ತನಕ ಸುಮ್ಮನಿರಿಸುವಂತೆ ಹಿರಿಯ ನಾಯಕರು ತಾಕೀತು ಮಾಡಿದ್ದಾರೆ. ಅದರೆ, ಯಡಿಯೂರಪ್ಪ ಮಾತು ಕೇಳದಿದ್ದರೆ, ಜೆಡಿಎಸ್ ಇದ್ದೇ ಇದೆ ಎಂದು ಬೆದರು ಬೊಂಬೆಯ ರೀತಿಯಲ್ಲಿ ತೋರಿಸಲಿದ್ದಾರೆ
ರೇವಣ್ಣ ಡಿ.ಸಿ.ಎಂ: ಒಂದು ವೇಳೆ ಯಡಿಯೂರಪ್ಪ ತಮ್ಮ ಗುಂಪಿನೊಂದಿಗೆ ಪಕ್ಷ ತೊರೆದರೆ ಆಗ ಜೆಡಿಎಸ್ ಪಕ್ಷದ ಬೆಂಬಲ ಪಡೆದು ಸಮ್ಮಿಶ್ರ ಸರ್ಕಾರ ರಚಿಸುವ ಕುರಿತು ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿದೆ.
ಹಾಗೇನಾದರೂ ಚೌಚೌ ಸರ್ಕಾರದ ಅಗತ್ಯ ಕಂಡು ಬಂದರೆ ರೇವಣ್ಣ ಅವರಿಗೆ ಉಪ ಮುಖ್ಯ ಮಂತ್ರಿ ಸ್ಧಾನ ನೀಡುವ ಬಗ್ಗೆಯೂ ಬಿಜೆಪಿ ನಾಯಕರು ಆಲೋಚನೆ ನಡೆಸಿದ್ದಾರೆ.
ಜೆಡಿಎಸ್ ಮೂಲಗಳ ಪ್ರಕಾರ ಸಮ್ಮಿಶ್ರ ಸರ್ಕಾರ ರಚನೆಯಾದರೆ ಉಪಮುಖ್ಯಮಂತ್ರಿ ಜೊತೆಗೆ ಹಣಕಾಸು, ಕಂದಾಯ ಖಾತೆ ನಮಗೇ ನೀಡಬೇಕು. ಜೊತೆಗೆ ಎಂಟು ಮಂದಿಯನ್ನು ಮಂತ್ರಿಗಳನ್ನಾಗಿ ಮಾಡಬೇಕೆಂದು ಬೇಡಿಕೆ ಇಡಲಿದ್ದಾರೆ ಎಂದು ಇದೇ ಮೂಲ ಗಳು ಹೇಳಿವೆ.












Click it and Unblock the Notifications