ಗಾಬರಿಗೆ ಬಿದ್ದ ಸುಬ್ರಮಣ್ಯ ಸ್ವಾಮಿ ಜಾಮೀನಿಗೆ ಮೊರೆ
ನವದೆಹಲಿ,
ಜ.13: 2ಜಿ ಹಗರಣದಲ್ಲಿ ಖುದ್ದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ವಿರುದ್ಧವೇ ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷ್ಯವನ್ನೊದಗಿಸಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯ ಸ್ವಾಮಿ ಅವರು ಬಂಧನದ ಭೀತಿಗೊಳಗಾಗಿದ್ದು, ದೆಹಲಿ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗೆ ಮನವಿ ಸಲ್ಲಿಸಿದ್ದಾರೆ. id="toptextpromo">ಗೃಹ
ಸಚಿವ ಚಿದಂಬರಂ ಅವರ ಕುಮ್ಮಕ್ಕಿನಿಂದ ದೆಹಲಿ ಪೊಲೀಸರು ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ. ಆದ್ದರಿಂದ ತಮಗೆ ಜಾಮೀನು ನೀಡಬೇಕು ಎಂದು ಸ್ವಾಮಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಚಿದಂಬರಂ
ಅವರು 2 ಜಿ ಹರಾಜಿನಲ್ಲಿ 2 ಕಂಪನಿಗಳ ಪರ ವಹಿಸಿ ಸರಿಯಾಗಿ 4 ವರ್ಷಗಳ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಸ್ವಾಮಿ ಅದನ್ನು ಸಹ ಸಾಕ್ಷ್ಯವಾಗಿ ಕೋರ್ಟಿಗೆ ಸಲ್ಲಿಸಿದ್ದಾರೆ. ಜತೆಗೆ ಚಿದಂಬರಂ ಅವರು ಇನ್ನೂ ಅನೇಕ ಬಲವಾದ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಈ ಸಾಕ್ಷ್ಯಗಳನ್ನು ಆಧರಿಸಿ ಚಿದಂಬರಂ ಅವರನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ಸ್ವಾಮಿ ಕೋರಿದ್ದಾರೆ.











Click it and Unblock the Notifications