ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಅಸಾಧ್ಯ!

DV Sadananda gowda
ಬೆಂಗಳೂರು, ಜ.12: ರಾಜ್ಯದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ ಅಸಾಧ್ಯ. ಹಂತ ಹಂತವಾಗಿ ನಿರ್ಬಂಧಿಸಬಹುದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನಿಷೇಧ ಖಂದಿತ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.

ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಸಂಪೂರ್ಣ ಮದ್ಯಪಾನ ನಿಷೇಧಗೊಳಿಸಿ ಎಂದು ಮುರುಘಾ ಮಠದ ಶಿವಮೂರ್ತಿ ಶರಣರು ಸರ್ಕಾರಕ್ಕೆ ಆಗ್ರಹಿಸಿದ್ದರು. ಈ ಬಗ್ಗೆ ಮಠಾಧಿಪತಿಗಳ ದುಂಡು ಮೇಜಿನ ಪರಿಷತ್ ನಲ್ಲಿ ಒಕ್ಕೊರಲ ಬೆಂಬಲ ಕೂಡಾ ಸಿಕ್ಕಿತು.

ಆದರೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸದಾನಂದ ಗೌಡ, ಮದ್ಯಪಾನ ನಿಷೇಧಕ್ಕೆ ನಿರಾಕರಿಸಿದ್ದಾರೆ. ಸರ್ಕಾರ ಮೊದಲು ಸರಾಯಿ ನಿಷೇಧಿಸಿತು.ಆದರೆ, ಕಳ್ಳಭಟ್ಟಿ ದಂಧೆ ಹತ್ತಿಕ್ಕಲು ಇನ್ನೂ ಸಾಧ್ಯವಾಗಿಲ್ಲ.

ಅಬಕಾರಿ ಇಲಾಖೆಗೆ ಪ್ರತಿ ವರ್ಷ ಶೇ .20ರಷ್ಟು ಅಧಿಕ ಆದಾಯ ಬರುತ್ತಿರುವುದು ನಿಜ ಎಂದು ಸದಾನಂದ ಗೌಡರು ಹೇಳಿದರು. ಮದ್ಯವ್ಯಸನದ ಬಗ್ಗೆ ಜನಜಾಗೃತಿ ಮೂಡಿಸಬೇಕು. ಜನರಿಗೆ ಮದ್ಯಪಾನದ ದುಷ್ಪರಿಣಾಮದ ಅರಿವು ಮೂಡಿದರೆ, ನಂತರ ನಿಷೇಧದ ಬಗ್ಗೆ ಯೋಚಿಸಬಹುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+