ಪಾಪ, ಯಡಿಯೂರಪ್ಪ, ಬಲಿಪಶು ಆದ್ನಲ್ಲಪ್ಪ: ವಿಶ್ವನಾಥ್

ದೇವನೊಬ್ಬ ನಾಮ ಹಲವು ಎನ್ನುವಂತೆ ಆರೆಸ್ಸೆಸ್, ಬಜರಂಗದಳ ಮತ್ತಿತರ ಹಿಂದೂಪರ ಸಂಘಟನೆಗಳು ಯಡಿಯೂರಪ್ಪ ಅವರ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಎಲ್ಲದಕ್ಕೂ ಯಡಿಯೂರಪ್ಪ ಬಲಿಪಶು ಆಗುತ್ತಿದ್ದಾರೆ.
ಇದು ಬಿಜೆಪಿಯ ಆಂತರಿಕ ವಿಚಾರವಾದರೂ ಬರೀ ಟೀಕೆ ಮಾಡುವುದೇ ನಮ್ಮ ಕೆಲಸವಲ್ಲ. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಅಭಿವೃದ್ಧಿಗೆ ಸ್ಪಂದಿಸಿದ್ದಾರೆ. ರೈಲ್ವೇ ಯೋಜನೆಗಳಿಗೆ ಸಾಕಷ್ಟು ಹಣ ಒದಗಿಸಿದ್ದಾರೆ.
ಬಿಎಸ್ ವೈ ದುಡ್ಡು ನೀಡುವುದರಲ್ಲಿ ನಿಸ್ಸೀಮ: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಕಾಲದಲ್ಲಿ ರೈಲ್ವೇ ಯೋಜನೆಗಳಿಗೆ ರಾಜ್ಯದ ಪಾಲಿನ ಶೇ.50 ರಷ್ಟು ಹಣ ನೀಡುವ ಕೆಲಸ ಆರಂಭವಾಯಿತು. ಧರ್ಮ ಸಿಂಗ್, ಕುಮಾರಸ್ವಾಮಿ ಅವಧಿಯಲ್ಲಿ ಅದು ನಿಂತು ಹೋಗಿತ್ತು, ಮತ್ತೆ ಯಡಿಯೂರಪ್ಪ ಅವರು ಆ ಕೆಲಸವನ್ನು ಪುನರಾಂಭಿಸಿದರು ಎಂದು ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ಆರೆಸ್ಸೆಸ್, ಬಿಜೆಪಿಗಳು ದಲ್ಲಾಳಿ ರಾಜಕಾರಣಕ್ಕಿಳಿದಿದೆ. ಪ್ರಸ್ತುತ ಸರ್ಕಾರದಲ್ಲಿ ಎಲ್ಲಾ ಸಚಿವರುಗಳು ಮಾತಿನ ಮಲ್ಲರು ಆದರೆ, ಅಭಿವೃದ್ಧಿ ಕಾರ್ಯ ಮಾತ್ರ ಆಗಿಲ್ಲ ಎಂದು ವಿಶ್ವನಾಥ್ ಟೀಕಿಸಿದ್ದಾರೆ.












Click it and Unblock the Notifications