ಟಿವಿ9ಗೆ 3ನೇ ಬಾರಿ ಪ್ರತಿಷ್ಠಿತ ರಾಮನಾಥ್ ಗೋಯೆಂಕಾ ಪ್ರಶಸ್ತಿ

Ramnath Goenka
ಬೆಂಗಳೂರು, ಜ. 12 : ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುವ ಉದ್ದೇಶದಿಂದ ಪತ್ರಿಕೋದ್ಯಮದ ಭೀಷ್ಮ ದಿ. ರಾಮನಾಥ್ ಗೋಯೆಂಕಾ ಹೆಸರಿನಲ್ಲಿ ಎಕ್ಸ್ ಪ್ರೆಸ್ ಗ್ರೂಪ್ ಸ್ಥಾಪಿಸಿರುವ ಪ್ರತಿಷ್ಠಿತ ಪ್ರಶಸ್ತಿಗೆ ಟಿವಿ9 ಸುದ್ದಿ ವಾಹಿನಿ ಪಾತ್ರವಾಗಿದೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಕಟ್ಟಾ ಬ್ರಹ್ಮಚಾರಿ ಹನುಮಂತ ದೇವರ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿ, ಅದರ ಕುರಿತು 'ಹನುಮನ ಹೆಂಡಿರು' ಎಂಬ ವರದಿಗಾಗಿ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಈ ಪ್ರಶಸ್ತಿ ಸಂದಿದೆ.

ಈ ಅನಿಷ್ಟ ದೇವದಾಸಿ ಪದ್ಧತಿ ಕುರಿತು ಸರಕಾರ ಮತ್ತು ಸಮಾಜ ಎತ್ತೆತ್ತುಕೊಳ್ಳುವಂತೆ ವರದಿ ಮಾಡಿದ್ದ ಹುಬ್ಬಳ್ಳಿಯ ವರದಿಗಾರ ಪ್ರಕಾಶ್ ನೂಲ್ವಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೆ ಅಭಿನಂದನೆಗಳು.

ನವದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಜ.16ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ವರದಿಗಾರಿಕೆ ಮಾಡುವಾಗ ತೋರುವ ಧೈರ್ಯ, ನಿಷ್ಪಕ್ಷಪಾತ, ನೇರವಂತಿಕೆ, ನಿಖರತೆಯನ್ನು ಅಳೆದು ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ, ಮುದ್ರಣ ಅಥವಾ ಎಲೆಕ್ಟ್ರಾನಿಕ್ ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+