ಜೈಲಿನಲ್ಲಿ ರೆಡ್ಡಿಯ ನೋಡಿ ಕಣ್ಣೀರಿಟ್ಟ ಮಡದಿ,ಮಕ್ಕಳು

ಬುಧವಾರ ಬೆಳಗ್ಗೆಯೇ ಜೈಲು ಅಧಿಕಾರಿಗಳು ರೆಡ್ಡಿಗೆ ಶುಭ ಕೋರಿದರು. ತದನಂತರ ಓಬಳಾಪುರಂ ಪ್ರಕರಣದಲ್ಲಿ ಜೈಲಿನಲ್ಲಿರುವ ಇತರೆ ಕೈದಿಗಳು ರೆಡ್ಡಿ ಬಳಿ ಧಾವಿಸಿ, ಹ್ಯಾಪಿ ಬರ್ತ್ ಡೇ ಹೇಳಿದರು. ಬಳಿಕ ಜೈಲು ಆವರಣದಲ್ಲಿ ಒಂದು ಗಂಟೆ ಕಾಲ ಸಾಯಿ ಬಾಬಾ ಬಜನೆ ಏರ್ಪಡಿಸಲಾಗಿತ್ತು.
ಜತೆಗೆ ಬಳ್ಳಾರಿ ಜಿಲ್ಲೆಯ ಅನೇಕ ರಾಜಕೀಯ ನಾಯಕರು, ಅಭಿಮಾನಿಗಳು ಸಹ ಜೈಲಿಗೆ ಆಗಮಿಸಿದ್ದರು. ಆದರೆ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ, ಒಬ್ಬ ಪುತ್ರ-ಪುತ್ರಿ, ರೆಡ್ಡಿ ಅವರ ತಂದೆ, ಅತ್ತೆ, ಶ್ರೀರಾಮುಲು ಮತ್ತು ಸಣ್ಣ ಫಕೀರಪ್ಪ ಅವರಿಗೆ ಮಾತ್ರ ಜೈಲಿನಲ್ಲಿ ರೆಡ್ಡಿ ಭೇಟಿಗೆ ಅವಕಾಶ ನೀಡಲಾಗಿತ್ತು.
ಸರಳುಗಳ ಹಿಂದೆ ರೆಡ್ಡಿಯನ್ನು ಕಂಡು ಅವರ ಪತ್ನಿ, ಮಕ್ಕಳು ಬಿಕ್ಕಿ ಬಿಕ್ಕಿ ಅತ್ತರು ಎಂದು ಜೈಲು ಮೂಲಗಳು ಹೇಳಿವೆ. ಇತ್ತ ಬಳ್ಳಾರಿಯಲ್ಲಿ ರೆಡ್ಡಿ ಜನ್ಮ ದಿನ ಸಮಾರಂಭ ಆಯೋಜಿಸಿದ್ದ ಅವರ ಸೋದರ ಸೋಮಶೇಖರ ರೆಡ್ಡಿ, ಅಣ್ಣನ ಗುಣಗಾನ ಮಾಡಿದರು. ಈ ವೇಳೆ, ಮಾಧ್ಯಮದೆದುರು ಮಾತನಾಡಿದ ಸೋಮಶೇಖರ್ ಅಣ್ಣನ ಅನುಪಸ್ಥಿತಿ ಪರಿಸ್ಥಿತಿಯನ್ನು ಅರಗಿಸಿಕೊಳ್ಳಲಾರದೆ ಒಂದೇ ಸಮನೆ ಕಣ್ಣಿರು ಹರಿಸಿದರು.
ಬುಧವಾರ ರೆಡ್ಡಿ ಜಾಮೀನು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಸಿಬಿಐ ವಿಶೇಷ ಕೋರ್ಟ್, ವಿಚಾರಣೆಯನ್ನು ಜನವರಿ 23ಕ್ಕೆ ಮುಂದೂಡಿ, ಜನ್ಮದಿನದ ಸಂಭ್ರದಲ್ಲಿದ್ದ ರೆಡ್ಡಿಗೆ ತೀವ್ರ ನಿರಾಶೆಯನ್ನುಂಟು ಮಾಡಿತು.












Click it and Unblock the Notifications