ಉಡುಪಿಯಲ್ಲಿ ಉಳಿದಿರುವುದು ಏಳು ಮಠ ಮಾತ್ರ!

Pejawar Seer
ಎರಡು ವರ್ಷಗಳಿಗೊಮ್ಮೆನಡೆಯುವ ಉಡುಪಿ ಪರ್ಯಾಯೋತ್ಸವ ಈ ಬಾರಿ ಅಷ್ಠಮಠಗಳಲ್ಲಿ ಒಬ್ಬ ಸ್ವಾಮಿಯನ್ನು ಹೊರಗಿಡಲಾಗಿದೆ.

ಪುತ್ತಿಗೆ ಮಠಾಧೀಶ ಸುಗುಣೇಂದ್ರರೇ ಈ ಬಾರಿಯ ಪರ್ಯಾಯ ಉತ್ಸವದಲ್ಲಿ ಸಪ್ತ ಮಠಾಧೀಶರಿಂದ ಬಹಿಷ್ಕರಿಸಲ್ಪಟ್ಟವರು. ಅವರು ಈ ಹಿಂದೆ ತನ್ನ ಪರ್ಯಾಯ ಅವಧಿಯಲ್ಲಿ ವಿದೇಶ ಪ್ರವಾಸ ಕೈಗೊಂಡಿರುವ ಕಾರಣಕ್ಕಾಗಿ ಅವರನ್ನು ಸಪ್ತಮಠಗಳ ತೀರ್ಥರು ವಿರೋಧಿಸುತ್ತ ಬಂದಿದ್ದಾರೆ.

ಅಂದಿನ ಭಿನ್ನಾಬಿಪ್ರಾಯ ಇನ್ನೊಂದು ಪರ್ಯಾಯೋತ್ಸವದಲ್ಲಿ ಸ್ಫೋಟಗೊಂಡಿದೆ. ಪುತ್ತಿಗೆ ಶ್ರೀಗಳನ್ನು ಪರ್ಯಾಯದ ದರ್ಬಾರು ಮತ್ತು ಮೆರವಣಿಗೆಯಿಂದ ಬಹಿಷ್ಕರಿಸಿ ಆಮಂತ್ರಣ ಪತ್ರಿಕೆ ಹಂಚಲಾಗಿದೆ.

ಶ್ರೀಕೃಷ್ಣ ಅಷ್ಠಮಠಗಳಲ್ಲಿ ಅಷ್ಠಮಠಗಳ ಶ್ರೀಗಳಿಂದ ನಡೆಯುತ್ತಿರುವ ಸಮಾಜ ಬೋಧನಾ ಕೆಲಸ ಇದೆಂದು ಕೆಲವರು ಕುಹಕವಾಡುವಂತಾಗಿದೆ.

ಹೇಳುವುದು ಶಾಸ್ತ್ರ ಇಕ್ಕುವುದು ಗಾಳ: ಇಂತಹ ಸ್ವಾಮಿಗಳು ಸಮಾಜಕ್ಕೆ ಬೋಧನೆ ಮಾಡಿದರೆಷ್ಟು, ಬಿಟ್ಟರೆಷ್ಟು ? ಹೌದು. ಸಮಾಜವನ್ನು ತಿದ್ದುವ (ಎನ್ನಲಾದ!) ಸ್ವಾಮಿಗಳು ಜನರನ್ನು ಎತ್ತಿ ಕಟ್ಟುವುದಕ್ಕೆ ಇದೂ ಒಂದು ನಿದರ್ಶನವಾಗುತ್ತದೆ.

ಹೇಳುವುದು ಶಾಸ್ತ್ರ ಇಕ್ಕುವುದು ಗಾಳ ಎಂದು ಹೇಳುವುದು ಇದಕ್ಕೆಯೇ ಅಲ್ಲವೇ ? ಹಿಂದೂಗಳು ಒಗ್ಗಟ್ಟಾಗಿರಬೇಕು, ಗೋಹತ್ಯೆ ನಡೆಸಬಾರದು, ಧರ್ಮ ಸಹಿಷ್ಣ g ಆಗಿರಬೇಕು ಎಂದೆಲ್ಲ ಬೋಧನೆ ಮಾಡುವ ಈ ಪೇಜಾವರ ಶ್ರೀ ಇದುವರೆಗೂ ತಮ್ಮ ಮಠದೊಳಗಿನ ಹುಳುಕು ಮತ್ತು ಪುತ್ತಿಗೆ ಶ್ರೀಯನ್ನು ಪರ್ಯಾಯದಿಂದ ಬಹಿಷ್ಕರಿಸಲಾಗಿರುವ ಬಗ್ಗೆ ಆಕ್ಷೇಪ ಎತ್ತಿಲ್ಲ.

ಅಂದರೆ ಅವರಿಗೂ ಅಷ್ಠಮ ಠವು ಸಪ್ತ ಮಠವಾಗುವುದು ಬೇಕಿದೆಯೇ ಎಂಬುದು ನೇರ ಸವಾಲಾಗಿದೆ. ತಮ್ಮ ಮಠದ ಸಮಸ್ಯೆ ಬಗೆಹರಿಸಲು ಮುಂದಾಗದ ಅಥವಾ ಅಂತಹ ಧೈರ್ಯ ತೋರಿಸದ ಪೇಜಾವರಶ್ರಿ ಇತರ ಸಮಸ್ಯೆಗಳನ್ನು ಅದ್ಯಾಗೆ ನಿಭಾಯಿಸುತ್ತಾರೋ ಶ್ರೀಕೃಷ್ಣನೇ ಬಲ್ಲ!

ಇನ್ನು ಸುಗುಣೇಂದ್ರ ತೀರ್ಥರು ವಿದೇಶ ಪ್ರವಾಸ ಕೈಗೊಂಡಿದ್ದರೆ ಅದು ಮಾಧ್ವ ಸಿದ್ಧಾಂತ ಪ್ರಚಾರಕ್ಕಾಗಿ ಎಂಬುದು ಪೇಜಾವರಶ್ರೀ ಸಹಿತ ಉಳಿದೆಲ್ಲ ಶ್ರೀಗಳಿಗೆ ಗೊತ್ತಿರುವ ವಿಷಯ.

ಪೇಜಾವರಶ್ರೀಗಳೇ ಉತ್ತರಿಸಿ: ಆದರೆ ಅವರು ಸಾಗರೋಲ್ಲಂಘನ ಮಾಡಿದ್ದಾರೆ ಎಂಬ ಕಾರಣಕ್ಕೆ ಅವರನ್ನು ದೂರೀಕರಿಸುವುದು ತಪ್ಪಲ್ಲವೇ ? ಇದಕ್ಕೆ ಪೇಜಾವರಶ್ರೀ 'ಒಂದು ವಾಕ್ಯದಲ್ಲಿ' ಉತ್ತರಿಸುವರೇ ? ಮಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ಪ್ರವಾಸ ಮಾಡುವಾಗ ಯಾವ 'ಸ್ವಾಮಿ' ಅರಬ್ಬಿ ಸಮುದ್ರ ಹಾದು ಹೋಗುವುದಿಲ್ಲ ಹೇಳಿ ? ನಿಮ್ಮ ಅರ್ಥದಲ್ಲಿ ಅಮೆರಿಕಕ್ಕೆ ಪ್ರವಾಸ ಮಾಡಿದರೆ ಮಾತ್ರ ಸಾಗರೋಲ್ಲಂಘನೆಯೇ ? ಆಧುನಿಕ ಯುಗದಲ್ಲಿ ಇಂತಹ ಕಂದಾಚಾರಗಳಿಗೆ ಬಲಿಯಾಗಿದ್ದಾರೆ ಎಂದರೆ ಜನಸಾಮಾನ್ಯ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ.

ಅಲ್ಲ ಮತ್ತೆ, ಉಡುಪಿ ಇತಿಹಾಸದಲ್ಲಿ ಅಷ್ಠ ಠಗಳ ಸ್ವಾಮಿಗಳು ವಿದೇಶ ಪ್ರ ಸ ಕೈಗೊಳ್ಳಬಾರದು ಎಂಬುದೇನಾದರೂ ಇದೆಯೇ ? ಒಂದು ವೇಳೆ ಹಾಗೇನಾದರೂ ಇದ್ದರೆ ಅದನ್ನು ಯಥಾವತ್ತಾ ಗಿ ಪಾಲಿಸುವುದು ಆಧುನಿಕತೆಗೆ ಭೂಷಣವೇ ? ಏನೇ ಇದ್ದರೆ 'ಸಮಾಜಕ್ಕೆ ಬೋಧನೆ ಮಾಡುತ್ತಿದ್ದೇವೆ' ಎನ್ನುತ್ತಿರುವ ಸಪ್ತ ಮಠಗಳ ಸ್ವಾಮಿಗಳು ಈಗ ಪುತ್ತಿಗೆ ಮಠಾಧೀಶರ ವಿವಾದ ಬಗೆಹರಿಸಿ ಸಮಾಜಕ್ಕೆ ಮಾರ್ಗದರ್ಶಕರಾಗಬೇಕು.

ಈ ಕೆಲಸ ಅಸಾಧ್ಯವಾದರೆ ಸಪ್ತಮಠಗಳ ಶ್ರೀಗಳು ಸಮಾಜಕ್ಕೆ ಬೋಧಿಸುವ ಹಕ್ಕನ್ನೂ ಕಳೆದುಕೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+