ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಐಟಿ ಕಂಪನಿಗಳು ಫಿಲಿಪೈನ್ಸ್‌ಗೆ ಪರಾರಿ?

By Mahesh
|
Google Oneindia Kannada News

Bangalore IT Decline
ಬೆಂಗಳೂರು, ಜ.11: ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿರುವ ಮಧ್ಯಮ ಗಾತ್ರದ ಮಾಹಿತಿ ತಂತ್ರಜ್ಞಾನ(ಐಟಿ) ಹಾಗೂ ಐಟಿಯೇತರ ಸಂಸ್ಥೆಗಳು ಫಿಲಿಫೈನ್ಸ್ ಗೆ ವರ್ಗವಾಗುವ ಸಾಧ್ಯತೆಯಿದೆ ಎಂದು ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ(ASSOCHAM) ವರದಿ ಹೇಳಿದೆ.

ಬೆಂಗಳೂರು ಹಾಗೂ ಹೈದರಾಬಾದಿನ ರಾಜಕೀಯ ಪರಿಸ್ಥಿತಿ, ಆರ್ಥಿಕ ಬಂಡವಾಳ ಹೂಡಿಕೆಗೆ ಪೂರಕವಾಗಿಲ್ಲ. ಈ ನಗರಗಳಲ್ಲಿ ನೆಲೆಯೂರಿರುವ ದೊಡ್ಡ ಸಾಫ್ಟ್ ವೇರ್ ಕಂಪನಿಗಳೇ ಸರ್ಕಾರದಿಂದ ಸರಿಯಾದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಮಧ್ಯಮ ಗಾತ್ರದ ಸಂಸ್ಥೆಗಳಿಗೆ ಇಲ್ಲಿನ ಮೂಲಭೂತ ಸೌಕರ್ಯ, ಮಾನವ ಸಂಪನ್ಮೂಲ ಬಳಸಿಕೊಂಡು ಸರ್ಕಾರದ ನೀತಿಗನುಗುಣವಾಗಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಹೇಳುತ್ತಿದೆ.

Sustaining India"s IT/ITeS Leadership ಎಂಬ ಶೀರ್ಷಿಕೆಯಡಿಯಲ್ಲಿ ತಯಾರಾಗಿರುವ ಈ ವರದಿಯಲ್ಲಿ ಮಧ್ಯಮ ಗಾತ್ರದ ಐಟಿ ಸಂಸ್ಥೆಗಳು ತಮ್ಮ ಸಂಪೂರ್ಣ ನೆಲೆಯನ್ನು ಬೆಂಗಳೂರಿನಿಂದ ಫಿಲಿಫೈನ್ಸ್ ಹಾಗೂ ಇತರೆ ನಗರಗಳಿಗೆ ವರ್ಗ ಮಾಡಲು ಉತ್ಸುಕರಾಗಿರುವುದನ್ನು ಸೂಚಿಸಲಾಗಿದೆ.

ಕಡಿಮೆ ಸಂಬಳಕ್ಕೆ ದುಡಿಯಬಲ್ಲ ಇಂಗ್ಲೀಷ್ ಗೊತ್ತಿರುವ ಉದ್ಯೋಗಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ದೊರೆಯುವ ಭರವಸೆಯೊಂದಿಗೆ ಇತರೆ ದೇಶಗಳಿಗೆ ಐಟಿ ಸಂಸ್ಥೆಗಳು ಈ ವಲಸೆಗೆ ಮುಂದಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಬೆಂಗಳೂರಿನ ಐಟಿ ಅಧಿಪತ್ಯ ಕೊನೆಗೊಳ್ಳುತ್ತದೆ ಹಾಗೂ ನಿರುದ್ಯೋಗ ಸಮಸ್ಯೆ ಹೆಚ್ಚಲಿದೆ ಎಂದು ಅಸ್ಸೋಚಾಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿಎಸ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.

ಫಿಲಿಫೈನ್ಸ್ ಅಲ್ಲದೆ, ವಿಯೆಟ್ನಾಂ, ಚೀನಾ, ಪೋಲೆಂಡ್, ಹಂಗೇರಿ, ಮೆಕ್ಸಿಕೋ, ಬ್ರೆಜಿಲ್ ಹಾಗೂ ಈಜಿಪ್ಟ್ ದೇಶಗಳತ್ತ ಕೂಡಾ ಬೆಂಗಳೂರಿನ ಐಟಿ ಸಂಸ್ಥೆಗಳು ಕಣ್ಣು ಹಾಕಿದೆ.

English summary
Bangalore and Hyderabad IT industry is declining, Medium sector IT and IT enabled services is likely to shift to Philippines, ietnam, China, Poland, Hungary, Mexico, Brazil, Egypt says Associated Chambers of Commerce and Industry (ASSOCHAM) latest report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X