ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಕೆ:ಮುನಿಯಪ್ಪ ಸಹಮತ

bhagavadgita-in-karnataka-schools-no-problem-kh-muniyappa
ಬೆಂಗಳೂರು, ಜ.9: ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಅಳವಡಿಸಬೇಕು ಎಂಬ ವಾದವನ್ನು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್‌. ಮುನಿಯಪ್ಪ ಬಲವಾಗಿ ಸಮರ್ಥಿಸಿದ್ದಾರೆ. ಭಗವದ್ಗೀತೆಯಲ್ಲಿ ಯಾವುದೇ ಧರ್ಮಕ್ಕೂ ಕಳಂಕ ತರುವ ವಿಚಾರಗಳಿಲ್ಲ. ಇದು ಯಾವುದೇ ಧರ್ಮಕ್ಕೂ ವಿರೋಧವಾಗಿಲ್ಲ. ಇದನ್ನು ಪಠ್ಯವಾಗಿ ಅಳವಡಿಸಿದರೆ ಯಾರೂ ವಿರೋಧಿಸುವುದಿಲ್ಲ ಎಂದರು.

ಭಾನುವಾರ ನಡೆದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಚಿಂತನೆಯನ್ನೇ ಒಳಗೊಂಡ ಭಗವದ್ಗೀತೆಯು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅತ್ಯಗತ್ಯ. ಆದ್ದರಿಂದ ಇದನ್ನು ಪುಸ್ತಕದಲ್ಲಿ ಅಳವಡಿಸುವುದು ತುಂಬಾ ಪ್ರಯೋಜನಕಾರಿ. ಇದನ್ನು ಮುಖ್ಯಮಂತ್ರಿ ಸದಾನಂದಗೌಡರು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಅಭಿಯಾನದ ಸಮರ್ಪಣಾ ಸಮಾರಂಭದಲ್ಲಿ ಸಚಿವರು, ಶಾಸಕರಾದಿಯಾಗಿ ಗಣ್ಯ ನಾಯಕರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಭಗವದ್ಗೀತೆ ಪಠಣ ಮಾಡಿ, ಗಮನಸೆಳೆದರು. ಡಿ.ವಿ. ಸದಾನಂದಗೌಡ ಮತ್ತು ಕೆ.ಎಚ್‌. ಮುನಿಯಪ್ಪ ಅವರನ್ನು ಹೊರತುಪಡಿಸಿದರೆ ಬೇರೆ ಯಾವ ಜನಪ್ರತಿನಿಧಿಗಳಿಗೂ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶ ಇರಲಿಲ್ಲ.

ಹೀಗಾಗಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್‌. ಅಶೋಕ್‌, ಶಾಸಕ ಬಿ.ಎನ್‌. ವಿಜಯಕುಮಾರ್‌, ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಸೇರಿದಂತೆ ಪ್ರಮುಖ ಗಣ್ಯರು ಮಠಾಧೀಶರ ಆಶೀರ್ವಾದ ಪಡೆದು ಪ್ರೇಕ್ಷಕರ ಸಾಲಿನಲ್ಲಿ ಬಂದು ಕುಳಿತು ಭಗವದ್ಗೀತೆ ಪಠಣ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+