ಬಿಜೆಪಿ ಹೈಕಮಾಂಡೇ ನನ್ನ ಬಳಿ ಬರಲಿ : ಯಡ್ಡಿ ಸೆಡ್ಡು

ರಾಜ್ಯದಲ್ಲಿ ಉದ್ಭವವಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ರಾಜ್ಯದ ನಾಯಕರನ್ನು ದೆಹಲಿಗೆ ಕರೆಸಲಾಗಿದೆ ಎಂಬ ಮಾತು ಕೇಳಿಬಂದಿರುವ ಹಿನ್ನೆಲೆಯಲ್ಲಿ, ನಾನೇಕೆ ದೆಹಲಿಗೆ ಹೋಗಲಿ ಹೈಕಮಾಂಡೇ ಬೆಂಗಳೂರಿಗೆ ಬರಲಿ ಸಮಸ್ಯೆಯನ್ನು ಬಗೆಹರಿಸಲಿ ಎಂದು ಯಡಿಯೂರಪ್ಪ ತೊಡೆ ತಟ್ಟಿದ್ದಾರೆ.
ಈ ಹೇಳಿಕೆಯಿಂದಾಗಿ ಬಿಜೆಪಿಯಲ್ಲಿ ಉದ್ಭವವಾಗಿರುವ ಬಿಕ್ಕಟ್ಟು ಮತ್ತಷ್ಟು ಉಲ್ಬಣವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಮುಖ್ಯಮಂತ್ರಿ ಪದವಿಗೆ ಯಡಿಯೂರಪ್ಪ ಪಟ್ಟು ಹಿಡಿದಿರುವುದು ಮತ್ತಷ್ಟು ನಿಚ್ಚಳವಾಗಿ ಗೋಚರಿಸುತ್ತಿದೆ.
ಈ ಉರಿಯುತ್ತಿರುವ ಬೆಂಕಿಗೆ ತುಮಕೂರಿನ ಶಾಸಕ ಸುರೇಶ್ ಗೌಡ ಅವರು ಮತ್ತಷ್ಟು ತುಪ್ಪ ಸುರಿದಿದ್ದು, ಸದಾನಂದ ಗೌಡರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇ ಯಡಿಯೂರಪ್ಪ, ಹೈಕಮಾಂಡ್ ಅಲ್ಲ ಎಂದು ಹೇಳಿದ್ದಾರೆ. ಗೃಹ ಸಚಿವ ಅಶೋಕ್ ಕೂಡ ತಮ್ಮ ಬೆಂಬಲವನ್ನು ಬದಲಿಸಿಕೊಂಡಿದ್ದು, ಯಡಿಯೂರಪ್ಪನವರ ಪರವಾಗಿ ದೆಹಲಿಯಲ್ಲಿ ಲಾಬಿ ನಡೆಸಲು ಶುರುಮಾಡಿಕೊಂಡಿದ್ದಾರೆ.












Click it and Unblock the Notifications