ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆರ್ಥಿಕ ಭಯೋತ್ಪಾದಕ' ರೆಡ್ಡಿ ಗಳಿಸಿದ್ದು 4300 ಕೋಟಿ: ಸಿಬಿಐ

By Srinath
|
Google Oneindia Kannada News

illegal-mining-reddy-obc-earned-4300-cr-rs-cbi
ಹೈದರಾಬಾದ್, ಜ.6: ಆರ್ಥಿಕ ಭಯೋತ್ಪಾದಕ, ಕರ್ನಾಟಕದ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಓಬಳಾಪುರಂ ಅಕ್ರಮ ಗಣಿಗಾರಿಕೆಯಿಂದ ಬರೋಬ್ಬರಿ 4,300 ಕೋಟಿ ರುಪಾಯಿ ಲಾಭ ಮಾಡಿಕೊಂಡಿದ್ದಾರೆ ಎಂದು ರೆಡ್ಡಿ ವಿರುದ್ಧ ಕೋರ್ಟಿನಲ್ಲಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸಿಬಿಐ ಹೇಳಿದೆ.

ಜನಾರ್ದನ ರೆಡ್ಡಿಯನ್ನು ಮೊದಲ ಆರೋಪಿಯಾಗಿಯೂ ನಂತರದಲ್ಲಿ ಅವರ ಭಾವ ಶ್ರೀನಿವಾಸ ರೆಡ್ಡಿ, ಹಿರಿಯ ಮಾಜಿ ಅಧಿಕಾರಿಗಳಾದ ರಾಜಗೋಪಾಲ ರೆಡ್ಡಿ ಮತ್ತು ದಿ. ಲಿಂಗಾರೆಡ್ಡಿ ಅವರನ್ನು ಹೆಸರಿಸಿದೆ. ಈ ಮಧ್ಯೆ, ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರ ವಿರುದ್ಧವೂ ಪ್ರಕರಣದ ಸಂಬಂಧ ಆರೋಪಪಟ್ಟಿ ದಾಖಲಿಸಲು ಅನುಮತಿ ಕೋರಿ ಕೇಂದ್ರ ಸಕಾರಕ್ಕೆ ಸಿಬಿಐ ಮನವಿ ಮಾಡಿಕೊಂಡಿದೆ.

ಓಬಳಾಪುರಂ ಮೈನಿಂಗ್ ಕಂಪನಿಯ ಸ್ಥಳೀಯ ವಹಿವಾಟು ಮತ್ತು ರಫ್ತು ಬಾಬತ್ತಿನಲ್ಲಿ 2007-10ರ ಅವಧಿಯಲ್ಲಿ ಒಟ್ಟು 4,300 ಕೋಟಿ ರುಪಾಯಿ ಗಳಿಸಲಾಗಿದೆ ಎನ್ನುತ್ತಿದೆ ಸಿಬಿಐ ಚಾರ್ಜ್ ಷೀಟ್. ಈ ಹಣದಿಂದಲೇ ರೆಡ್ಡಿ ಹೆಲಿಕಾಪ್ಟರ್ ಖರೀದಿಸಿದ್ದು ಎಂದು ಸಿಬಿಐ ಉಲ್ಲೇಖಿಸಿದೆ.

ರೆಡ್ಡಿಗೆ ದೈವದತ್ತ ವರವಾದ ಬೀಜಿಂಗ್ ಒಲಿಂಪಿಕ್ಸ್: ಜನಾರ್ದನ ರೆಡ್ಡಿಗೆ ಚೀನಾದ ಬೀಜಿಂಗ್ ಒಲಿಂಪಿಕ್ಸ್ ದೈವದತ್ತ ವರವಾಗಿ ಪರಿಣಮಿಸಿತು. ಈ ಸುಭಿಕ್ಷ ಕಾಲದಲ್ಲೇ ಆತ ಆ ಪಾಟಿ ದುಡ್ಡು ಕೊಳ್ಳೆ ಹೊಡೆದಿದ್ದು ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ನೋಡಿ, 2007-08ರಲ್ಲಿ ಕಬ್ಬಿಣದ ಅದಿರು ಬೆಲೆ ಟನ್ನಿಗೆ 3,968 ರುಪಾಯಿಯಿತ್ತು. ಅದೇ ಟನ್ ಅದಿರಿನ ಬೆಲೆ 2008ರ ನಂತರ 1,758 ರುಪಾಯಿಗೆ ಕುಸಿದುಬಿತ್ತು. ಅಂದರೆ 2007-08ರ ಅವಧಿಯಲ್ಲಿ ರೆಡ್ಡಿ ಓಬಾಪುಂ ಕಂಪನಿ 2,316 ಕೋಟಿ ರುಪಾಯಿ ಗುಡ್ಡೆ ಹಾಕಿತು. ಇದೆಲ್ಲ ಬೀಜಿಂಗ್ ಒಲಿಂಪಿಕ್ಸ್ ಪ್ರಭಾವ ಎಂದು ಸಿಬಿಐ ಆರೋಪಪಟ್ಟಿ ಕಟ್ಟಿದೆ.

English summary
The Obulapuram Mining Company Pvt Ltd (OMCPL), owned by former Karnataka minister G. Janardhan Reddy, earned over Rs 4,300 crore from illegally selling iron ore, the CBI's chargesheet says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X