ಶೋಭಾ ಏನ್ಮಾಡ್ತಿದ್ದಾರೆ ಯಾವನಿಗೊತ್ತು: ಡಿವಿಎಸ್

ಪಕ್ಷದ ವರಿಷ್ಠರನ್ನು ಕಂಡು ಮಾತನಾಡುವುದು ಪ್ರತಿಯೊಬ್ಬ ಸಚಿವರೂ ಸಾಮಾನ್ಯವಾಗಿ ಮಾಡುವ ಕ್ರಿಯೆ. ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚಿಸಿದರೆ ಅದರಲ್ಲಿ ತಪ್ಪೇನಿದೆ. ಬಿಜೆಪಿ ಬಿಕ್ಕಟ್ಟು ಈ ರೀತಿ ಪರಿಹಾರವಾದರೆ ಒಳ್ಳೆಯದು ಎಂದು ಸದಾನಂದ ಗೌಡರು ಹೇಳಿದರು.
ಗೊಂದಲ ನಿವಾರಣೆ: ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ನಡುವಿನ ಗೊಂದಲ ನಿವಾರಣೆಯಾಗುವ ವಿಶ್ವಾಸ ಇದೆ. ಪ್ರಾಯಶಃ ಈ ವಿಷಯದಲ್ಲಿ ವರಿಷ್ಠರು ತಲೆ ಹಾಕುವ ಸಾಧ್ಯತೆ ಕಮ್ಮಿ ಎಂದರು.
ಮಾರ್ಚ್ ಮೊದಲ ವಾರ ವಿಧಾನಮಂಡಲ ಬಜೆಟ್ ಅಧಿವೇಶನ ನಡೆಯಲಿದೆ. ಜ. 30 ರಿಂದ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಉಪಯುಕ್ತ ಚರ್ಚೆ ನಡೆಯಲಿದೆ. ವಿಪಕ್ಷಗಳು ಚರ್ಚೆಯಲ್ಲಿ ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಲಿ ಎಂದು ಆಹ್ವಾನ ನೀಡಿದರು.












Click it and Unblock the Notifications