ಯಡಿಯೂರಪ್ಪ ಸಂಹಾರಕ್ಕೆ ವಜ್ರದೇಹಿ ಯಾಗ?

ಆದರೆ, ಗುರುಪುರ ವಜ್ರದೇಹಿ ಮಹೋತ್ಸವ ಹಾಗೂ ಶತ ಚಂಡಿಕಾ ಯಾಗದ ಪೂರ್ಣಾಹುತಿ ನೀಡಿದ್ದು ಯಡಿಯೂರಪ್ಪ ಅಲ್ಲ. ಅದರ ಬದಲಿಗೆ ಪ್ರತಿಸ್ಪರ್ಧಿ ಹಾಲಿ ಸಿಎಂ ಸದಾನಂದ ಗೌಡ ಎಂಬುದು ಗಮನಾರ್ಹ.
ಲೋಕ ಕಲ್ಯಾಣಾರ್ಥ ಈ ಯಾಗ ಎಂದು ಹೇಳಿಕೊಳ್ಳಲಾಗಿದ್ದರೂ, ಈ ಅಗ್ನಿ ಕಾರ್ಯವನ್ನು ಅಧಿಕಾರ ಮರಳಿ ಗಿಟ್ಟಿಸಲು ಯಡಿಯೂರಪ್ಪರೇ ಹಣ ಹಾಕಿ ಮಾಡಿಸುತ್ತಿದ್ದಾರೆಂದು ಎಂದು ಮೊದಲಿಗೆ ಎಲ್ಲರೂ ತಿಳಿದಿದ್ದರು.
ಅದರಂತೆ, ಆಹ್ವಾನ ಪತ್ರಿಕೆಯಲ್ಲಿ ಯಡಿಯೂರಪ್ಪ, ಮುರುಗೇಶ ನಿರಾಣಿ, ಉಮೇಶ ಕತ್ತಿ, ವಿ ಸೋಮಣ್ಣ, ಯಡ್ಡಿ ಪುತ್ರ ರಾಘವೇಂದ್ರರ ಹೆಸರು ಕಂಡು ಬಂದಿತ್ತು.
ಆದರೆ, ಯಡಿಯೂರಪ್ಪ ಅಂಡ್ ಗ್ಯಾಂಗ್ ಯಜ್ಞ ಆಯೋಜಕರಿಗೆ ಕೈ ಕೊಟ್ಟು, ಯಾಗದ ವಾಸನೆ ಮೂಗಿಗೆ ಬಡಿಯದಂತೆ ದೂರ ಸರಿದಿದ್ದಾರೆ.
ಮಠ-ದೇವಸ್ಥಾನ, ಪೂಜೆಗಳಿಗೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ಲೆಕ್ಕದಲ್ಲಿ ಧಾರೆಯೆರೆದ ಯಡಿಯೂರಪ್ಪ ಇಷ್ಟು ದೊಡ್ಡ ಯಾಗಕ್ಕೆ ಹಿಂದೇಟು ಹಾಕಲು ಬೇರೆ ಕಾರಣವೇ ಇಲ್ಲ. ಈ ಎಲ್ಲಾ ಅಂಶಗಳು ಯಡ್ಡಿ ಮಣಿಸಲು ಯಾಗ ನಡೆದಿದೆ ಎಂಬ ಗುಮಾನಿಗೆ ಪುಷ್ಠಿ ನೀಡಿವೆ.
ದೈವ ಭಕ್ತ ಯಡ್ಡಿ ಈ ನಿರ್ಣಯಕ್ಕೆ ಕಾರಣವೇನು?....












Click it and Unblock the Notifications