ಮಠಕ್ಕೆ ಬೆನ್ನು ತಿರುಗಿಸಿದ ದೈವ ಭಕ್ತ ಯಡ್ಡಿ

ಮಠದ ಸ್ವಾಮಿ ರಾಜಶೇಖರಾನಂದ ಪಾರುಪಥ್ಯ ವಹಿಸಿದ್ದರು. ಫಲಿಮಾರು ಸ್ವಾಮೀಜಿಯಿಂದ ದೀಕ್ಷೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ವಾಮಚಾರದಲ್ಲೂ ಇವರು ಎತ್ತಿದ ಕೈ ಎಂಬ ಸುದ್ದಿ ಯಡಿಯೂರಪ್ಪರ ಕಿವಿ ಮೇಲೆ ಬಿದ್ದಿದ್ದೇ ತಡ, ಯಡಿಯೂರಪ್ಪ ಅವರ ಮೈ ನಡುಕ ಹೆಚ್ಚಿದೆ.
ಯಾಗಕ್ಕೆ ಯಾರು ಹೋಗಬೇಡಿ ಎಂದು ಯಡಿಯೂರಪ್ಪ ತಮ್ಮ ಅಪ್ತರಿಗೆ ಸೂಚಿಸಿದ್ದಾರೆ. ಈ ವಿಷಯ ತಿಳಿದ ಮುರುಗೇಶ ನಿರಾಣಿ 'ಕರಾವಳಿ ವಾಣಿಜೋದ್ಯಮದ ಶೃಂಗ ಸಭೆ'ಯಲ್ಲಿ ಭಾಗವಹಿಸಿ ಅಲ್ಲಿಂದ ನೇರ ರಾಜಧಾನಿ ಕಡೆ ತೆರಳಿದರು.
ಯಾಗಕ್ಕೆ ಡಿವಿಎಸ್ ಸಾರಥ್ಯ: ಯಡಿಯೂರಪ್ಪ ಕೈಕೊಡುತ್ತಾರೆಂಬ ಸುದ್ದಿ ತಿಳಿದ ಕೂಡಲೇ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಆಗಮಿಸಿದ ಸಿಎಂ ಡೀವಿ ನೇರವಾಗಿ ಯಾಗ ಶಾಲೆಗೆ ತೆರಳಿದರು.
ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ, ಸಚಿವರಾದ ವಿ ಎಸ್ ಆಚಾರ್ಯ, ಕೃಷ್ಣಪಾಲೇಮಾರ್, ಉಪಸಭಾಪತಿ ಯೋಗೀಶ್ ಭಟ್, ಸಂಸದ ನಳಿನ್‌ಕುಮಾರ್ ಕಟೀಲ್ ಮತ್ತಿತರರು ಅವರಿಗೆ ಸಾಥ್ ನೀಡಿದ್ದರು.
'ಮುಖ್ಯಮಂತ್ರಿ ಸ್ಥಾನದ ಬಗ್ಗೆ ಗೊಂದಲ ಉಂಟಾಗಿರುವ ಸಂದರ್ಭದಲ್ಲಿ ಈ ಯಾಗ ಆತ್ಮಶಕ್ತಿ ಹೆಚ್ಚಿಸಿದೆ. ರಾಜ್ಯ ಹಾಗೂ ದೇಶಕ್ಕೆ ಒಳ್ಳೆಯದಾಗಲಿ ದೇವರಲ್ಲಿ ಪ್ರಾರ್ಥಿಸಿದ್ದೇನೆ.ಈ ಯಾಗದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ' ಎಂದು ಸಿಎಂ ಸದಾನಂದ ಗೌಡರು ಹೇಳಿದ್ದು ನಾನಾ ಅರ್ಥಗಳನ್ನು ನೀಡಿದ್ದಂತೂ ಸುಳ್ಳಲ್ಲ.












Click it and Unblock the Notifications