ಬಾಲಕೃಷ್ಣಗೌಡಗೆ ಮತ್ತೆ ಲೋಕಾಯುಕ್ತ ತನಿಖೆ ಕಾಟ

HD Balakrishna Gowda
ಬೆಂಗಳೂರು, ಜ.5: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಎಚ್ ಡಿ ಬಾಲಕೃಷ್ಣ ಗೌಡರ ವಿರುದ್ಧ ಲೋಕಾಯುಕ್ತ ಪೊಲೀಸರ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ. ಈ ಮುಂಚೆ ಬಾಲಕೃಷ್ಣಗೌಡರ ಮೇಲೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಅದರೆ, ಎಫ್ಐಆರ್ ರದ್ದುಗೊಳಿಸುವಂತೆ ಬಾಲಕೃಷ್ಣಗೌಡ ಅವರು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿವಿ ಪಿಂಟೋ ಅವರ ನ್ಯಾಯಪೀಠ ವಿಚಾರಣೆಗೆ 8 ವಾರಗಳ ಕಾಲ ತಡೆಯಾಜ್ಞೆ ನೀಡಿದ್ದರು.

ನೋ ರಿಲೀಫ್: ನಿವೃತ್ತ ಇಂಜಿನಿಯರ್ ಎಸ್ ಎನ್ ಬಾಲಕೃಷ್ಣ ಅವರ ದೂರು ಆಧರಿಸಿ ಲೋಕಾಯುಕ್ತ ಸಂಸ್ಥೆ ನಡೆಸುವ ತನಿಖೆ ರದ್ದುಗೊಳಿಸುವಂತೆ ಬಾಲಕೃಷ್ಣಗೌಡ ಮಾಡಿಅದ್ ಮನವಿಯನ್ನು ಎನ್ ಆನಂದ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ತನಿಖೆಗೆ ಅಡ್ಡಿಪಡಿಸದಂತೆ ಬಾಲಕೃಷ್ಣಗೌಡರಿಗೆ ಸೂಚಿಸಿದೆ.

ಎಸ್ ಎನ್ ಬಾಲಕೃಷ್ಣ ಅವರು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಶೇಷಾಧಿಕಾರಿಯಾಗಿದ್ದರು. ಈ ಪ್ರಕರಣ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಬಾಲಕೃಷ್ಣಗೌಡರ ಪರ ವಕೀಲರು ಮಂಡಿಸಿದ ವಾದವನ್ನು ನ್ಯಾ ಆನಂದ್ ತಳ್ಳಿಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+