ಅತ್ಯಧಿಕ ಸಂಬಳ ಪಡೆಯುವ ರಾಜಕಾರಣಿ

Singapore PM Lee
ಸಿಂಗಪುರ, ಜ.5: ವಿಶ್ವದಲ್ಲೇ ಅತ್ಯಧಿಕ ವೇತನ ಪಡೆಯುವ ರಾಜಕಾರಣಿಗಳ ಪಟ್ಟಿಯಲ್ಲಿ ಸಿಂಗಪುರದ ಪ್ರಧಾನಿ ಲೀ ಸೈನ್ ಲೂಂಗ್ ಅಗ್ರಸ್ಥಾನ ಪಡೆದಿದ್ದಾರೆ.

ವಿಶೇಷವೆಂದರೆ, ಇತ್ತೀಚೆಗೆ ಸಿಂಗಪುರದ ಸಚಿವಾಲಯ ತಮ್ಮ ವೇತನದ ಮೂರನೇ ಒಂದು ಭಾಗ ಕಡಿತಗೊಳಿಸಲಾಗಿದೆ. ಆದರೂ ಸಿಂಗಪುರ ಪ್ರಧಾನಿ ವೇತನ 1.7 ಮಿಲಿಯನ್(ಅಂದಾಜು 1,756,930 USD) ಯುಎಸ್ ಡಾಲರ್ ಅತ್ಯಧಿಕ ಚುನಾಯಿತ ವ್ಯಕ್ತಿ ಪಡೆಯುವ ಸಂಬಳ ಎನಿಸಿದೆ.

ಸಿಂಗಪುರದ ಸಚಿವಾಲಯದ ವೇತನ ಕಡಿತ 2011ರ ಮೇ 21ರಿಂದ ಅನ್ವಯಗೊಳ್ಳಲಿದೆ. ಜಾಗತಿಕ ಆರ್ಥಿಕ ಹಿಂಜರಿತ ಸಿಂಗಪುರದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸಿಂಗಪುರದಲ್ಲಿ ಬಡವರು ಹಾಗೂ ಶ್ರೀಮಂತರ ನಡುವಿನ ಆದಾಯದಲ್ಲಿ ಭಾರೀ ಅಂತರ ಏರ್ಪಟ್ಟಿತ್ತು.

ಎರಡನೇ ಸ್ಥಾನದಲ್ಲಿ ಹಾಂಗ್ ಕಾಂಗ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೋನಾಲ್ಡ್ ತ್ಸಾಂಗ್ ಸ್ಥಾನ ಪಡೆದಿದ್ದಾರೆ. 550,000 ಡಾಲರ್ ವಾರ್ಷಿಕ ವೇತನ ಪಡೆಯುತ್ತಿದ್ದಾರೆ.

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಜೂಲಿಯಾ ಗಿಲ್ಲಾರ್ಡ್ ಅವರು 498,200 ಡಾಲರ್ ವೇತನ ಪಡೆದು, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾರನ್ನು ನಾಲ್ಕನೇ ಸ್ಥಾನಕ್ಕೆ ದೂಡಿದ್ದಾರೆ. ಒಬಾಮಾರ ವಾರ್ಷಿಕ ವೇತನ 400,000 ಡಾಲರ್ ನಷ್ಟಿದೆ.

ಉಳಿದಂತೆ ಐರ್ಲೆಂಡ್ ನ ಬ್ರಿಯಾನ್ ಕೊವೆನ್, ಫ್ರೆಂಚ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ, ಜರ್ಮನಿಯ ಚಾನ್ಸೆಲರ್ ಆಂಜೆಲಾ ಡೊರೊತಿಯಾ ಮೆರ್ಕೆಲ್, ಕೆನಡಾ ಪ್ರಧಾನಿ ಸ್ಟೀಫನ್ ಜೋಸೆಫ್ ಹಾರ್ಪರ್,

ಒಬಾಮರಿಗೆ ಹೋಲಿಸಿದಲ್ಲಿ ಲೀ ಸೀನ್ ಲೂಂಗ್‌ರ ವೇತನ ನಾಲ್ಕು ಪಟ್ಟು ಅಧಿಕವಾಗಿದ್ದು, ಇದು ವಿಶ್ವದ ಪ್ರಜಾಪ್ರಭುತ್ವ ಸರ್ಕಾರದ ಮುಖ್ಯಸ್ಥನೊಬ್ಬ ಪಡೆಯುತ್ತಿರುವ ಗರಿಷ್ಠ ವೇತನವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+