ಜಗನ್ ಬಂಧಿಸಿದರೆ ವೈಎಸ್ಆರ್ ಪಕ್ಷಕ್ಕೆ ಲಾಭ?

YS Jagan Mohan Reddy
ಹೈದರಾಬಾದ್, ಜ.4: ಬಂಧನ ಭೀತ್ ಇಎದುರಿಸುತ್ತಿರುವ ವೈಎಸ್ ಜಗನ್ ಮೋಹನ್ ರೆಡ್ಡಿ ಬಂಧನ ಜನವಿ ತಿಂಗಳ ಅಂತ್ಯಕ್ಕೆ ನಡೆಯಲಿದೆ ಎಂಬ ಸುದ್ದಿಯಿದೆ. ಆದರೆ, ಜಗನ್ ಬಂಧನದಿಂದ ವೈಎಸ್ಆರ್ ಕಾಂಗ್ರೆಸ್ ಗೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆಯಿದೆ.

ಸಿಬಿಐ ಉರುಳಿಗೆ ಜಗನ್ ಸಿಕ್ಕಿಕೊಂಡ ಮೇಲೆ, ಜಾರಿ ನಿರ್ದೇಶನಾಲಯ ಕೂಡಾ ಜಗತಿ ಪಬ್ಲಿಕೇಷನ್(ಸಾಕ್ಷಿ ಟಿವಿ ಹಾಗೂ ದಿನಪತ್ರಿಕೆ) ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಜಗನ್ ಬಂಧನವಾದರೆ, ಆತನ ತಾಯಿ ವೈಎಸ್ ರಾಜಶೇಖರ ರೆಡ್ಡಿ ಪತ್ನಿ ವಿಜಯಮ್ಮ ಅವರು ಒಡರ್ಪು ಯಾತ್ರ ಮುಂದುವರೆಸಿ, ಜನರ ಸಂತಾಪ ಭಾವನೆಯನ್ನು ತಮ್ಮತ್ತ ಸೆಳೆದುಕೊಳ್ಳಲಿದ್ದಾರೆ. ವೈಎಸ್ ಆರ್ ಅಭಿಮಾನಿಗಳು ಸಹಜವಾಗಿ ಜಗನ್ ಬಂಧನದಿಂದ ರೊಚ್ಚಿಗೇಳುವ ಸಂಭವವಿದೆ. ಇದರ ಲಾಭ ಪಡೆಯಲು ಪಕ್ಷ ಸಿದ್ಧತೆ ನಡೆಸಿದೆ.

2014ರ ಅಸೆಂಬ್ಲಿ ಚುನಾವಣೆಯ ಮೇಲೇ ಕಣ್ಣಿಟ್ಟಿದ್ದ ಕಾಂಗ್ರೆಸ್ ಜೊತೆ ತಮ್ಮ ಪಕ್ಷವನ್ನು ವಿಲೀನಗೊಳಿಸಲು ಸಿದ್ಧರಿದ್ದರು. ಅಕ್ರಮಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ರೀತಿ ನನ್ನನ್ನು ಬಂಧಿಸಬಾರದು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಲು ಸಿದ್ಧ ಎಂದಿದ್ದರು.

ಅದರೆ, ಜಗನ್ ಬಂಧನವಾದರೆ ಎಲ್ಲವೂ ಸುಳ್ಳಾಗುತ್ತದೆ. ಜಗನ್ ಬಂಧನ ಒಟ್ಟಿನಲ್ಲಿ ಕಾಂಗ್ರೆಸ್ಸಿಗೆ ಕಗ್ಗಂಟ್ಟಾಗಿ ಪರಿಣಮಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+