ಸರಣಿ ಸ್ಫೋಟ: ಮದನಿಗೆ ಜಾಮೀನು ಇಲ್ಲ: ಸುಪ್ರೀಂ

ಆದರೆ, ನ್ಯಾ. ಪಿ ಸದಾಶಿವಂ ಮತ್ತು ಜೆ ಚೆಲಮೆಶ್ವರ್ ಅವರಿದ್ದ ಪೀಠ, ಜಾಮೀನು ನೀಡಲು ನಿರಾಕರಿಸಿದೆ. ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಸ್ಥಾಪಕ ಅಬ್ದುಲ್ ಮದನಿ ಅನಾರೋಗ್ಯಕ್ಕೆ ಬೆಂಗಳೂರಿನಲ್ಲಿರುವ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಈ ಮುಂಚೆ ನ್ಯಾ. ಖಟ್ಜು ಮದನಿಗೆ ಜಾಮೀನು ನೀಡುವುದಕ್ಕೆ ಒಲವು ತೋರಿದ್ದರು, ನ್ಯಾ. ಮಿಶ್ರಾ ಅವರು ಜಾಮೀನು ನೀಡಿಕೆಗೆ ನಿರಾಕರಿಸಿದ್ದರು.
2008ರಲ್ಲಿ ಬೆಂಗಳೂರಿನಲ್ಲಿ ಸುಮಾರು 9 ಕಡೆ ಸಂಭವಿಸಿದ ಸರಣಿ ಸ್ಫೋಟದಲ್ಲಿ 2 ಸಾವನ್ನಪ್ಪಿದ್ದರು. 20ಕ್ಕೂ ಅಧಿಕ ಜನ ಗಾಯಗೊಂಡಿದ್ದರು.
ಕೊಯಮತ್ತೂರಿನ ಸರಣಿ ಸ್ಫೋಟ ರುವಾರಿಯೂ ಆಗಿರುವ ಮದನಿ ಕೊಯಮತ್ತೂರು ಸ್ಫೋಟ ಪ್ರಕರಣದಿಂದ ಖುಲಾಸೆಗೊಂಡಿದ್ದಾನೆ. ಆದರೆ, ಬೆಂಗಳೂರು ಪ್ರಕರಣದ ಪ್ರಮುಖ ಆರೋಪಿಯಾಗಿ
ಮದನಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.












Click it and Unblock the Notifications