ಈಟಿವಿ, ಟಿವಿ18 ಕೈವಶ ಮಾಡಿಕೊಂಡ ರಿಲಯನ್ಸ್?

ಮನಿಕಂಟ್ರೋಲ್.ಕಾಂ ಮುಂತಾದ ವೆಬ್ ತಾಣ ಹಾಗೂ ಸಿಎನ್ ಬಿಸಿ, ಸಿಎನ್ ಎನ್ ಐಬಿಎನ್ ಮುಂತಾದ ಪ್ರಮುಖ ಸುದ್ದಿ ವಾಹಿನಿಗಳನ್ನು ಟಿವಿ18 ಬ್ರಾಡ್ ಕಾಸ್ಟ್ ನಿಯಂತ್ರಿಸುತ್ತಿದೆ.
ಬಲ್ಲ ಮೂಲಗಳ ಪ್ರಕಾರ ಟಿವಿ 18 ಪ್ರಸಾರ ಸಂಸ್ಥೆಯಲ್ಲಿ ರಿಲಯನ್ಸ್ ಸುಮಾರು 1,500 ಕೋಟಿ ರು ಹೂಡುವ ಸಾಧ್ಯತೆಯಿದೆ. ಈ ಹೂಡಿಕೆಯಿಂದ ಟಿವಿ 18 ಸಮೂಹದ ಮುಖ್ಯಸ್ಥ ರಾಘವ್ ಬೆಹ್ಲ್ ಅವರು ನೆಟ್ವರ್ಕ್ 18 ಹಾಗೂ ಟಿವಿ 18 ನ ಹಕ್ಕುಗಳನ್ನು ಪಡೆಯಲು ಸುಲಭವಾಗಲಿದೆ. ಪ್ರಸಾರದ ಹಕ್ಕುಗಳ ಮೊತ್ತ ಸುಮಾರು 3,500 ಕೋಟಿ ರು ಮೀರಲಿದೆ.
ಆದರೆ ಈ ಬಗ್ಗೆ ನೆಟ್ವರ್ಕ್ 18ನ ಸಿಇಒ ಬಿ ಸಾಯಿ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲಭ್ಯ ಮಾಹಿತಿಯಂತೆ ರಾಮೋಜಿರಾವ್ ಒಡೆತನದ ಈನಾಡು ಸಮೂಹದಲ್ಲಿ ರಿಲಯನ್ಸ್ ಸಂಸ್ಥೆ 2,600 ಕೋಟಿ ರು ಹೂಡಿದೆ. ಈಟಿವಿ ಸಮೂಹದ ಎಲ್ಲಾ ವಾಹಿನಿಗಳ ಮೇಲೆ ರಿಲಯನ್ಸ್ ತನ್ನ ಅಧಿಪತ್ಯ ಸ್ಥಾಪಿಸಲಿದೆ.(ಗುಡ್ ರಿಟರ್ನ್ಸ್)












Click it and Unblock the Notifications