ಉಡುಪಿ ಲೋಕಸಭೆ: ಟಿಕೆಟ್ ಗಾಗಿ ಲಾಬಿ ಶುರು

2009 ರಲ್ಲಿ ನಡೆದ ಚುನಾವಣೆಯಲ್ಲಿ ಸದಾನಂದ ಗೌಡ ಮತ್ತು ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ನಡುವೆ ತೀವ್ರ ಹಣಾಹಣಿ ನಡೆದು ಗೌಡ್ರು 27ಸಾವಿರ ಮತಗಳಿಂದ ಜಯದ ನಗೆ ಬೀರಿದ್ದರು. ಕಳೆದ ಬಾರಿ ಸ್ಪರ್ಧಿಸಿರದ ಜೆಡಿಎಸ್ ಈ ಬಾರಿ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಲು ನಿರ್ಧರಿಸಿದೆ.
ಈ ಬಾರಿ ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಲು ಸಕಲ ಕಸರತ್ತು ನಡೆಸಬೇಕಿದೆ. ಜಾತಿ ಲೆಕ್ಕಾಚಾರ ಪ್ರಮುಖವಾಗಿರುವುದರಿಂದ ಸೂಕ್ಷ್ಮವಾಗಿ ಪರಿಶೀಲಿಸಿದ ನಂತರವೇ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಎಲ್ಲಾ ಪ್ರಮುಖ ಪಕ್ಷಗಳು ನಿರ್ಧರಿಸಿವೆ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮ ಹೆಸರುಗಳಿಸಿರುವ ಜಯಪ್ರಕಾಶ್ ಹೆಗ್ಡೆಗೆ ಒಂದುವೇಳೆ ಮತ್ತೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಇತರ ಪಕ್ಷಗಳಿಗೆ ಮುಖ್ಯವಾಗಿ ಬಿಜೆಪಿಗೆ ಕ್ಷೇತ್ರ ಕೈಜಾರುವ ಸಾಧ್ಯತೆ ಇಲ್ಲದಿಲ್ಲ.
ಬಿಜೆಪಿ ಟಿಕೆಟ್ ಗಾಗಿ ಲಾಬಿ ನಡೆಸುತ್ತಿರುವ ಹೆಸರುಗಳೆಂದರೆ:
1. ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮತ್ತು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಸುನಿಲ್ ಕುಮಾರ್. ಇವರು ಅನಂತ್ ಕುಮಾರ್ ಬಣದಲ್ಲಿ ಕಾಣಿಸಿ ಕೊಳ್ಳುತ್ತಿರುವುದರಿಂದ ಅನಂತ್ ಬೆಂಬಲ ಇವರಿಗೆ ಇದ್ದೇ ಇದೆ.
2. ಚಿಕ್ಕಮಗಳೂರು ಜಿಲ್ಲೆ ಬಿಜೆಪಿ ಅಧ್ಯಕ್ಷರಾಗಿರುವ ಪ್ರಾಣೇಶ್
3. ಉಡುಪಿ ಜಿಲ್ಲೆ ಬಿಜೆಪಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ
4. ಬಂಜಾರ ಹೋಟೆಲ್ ಮಾಲೀಕರಾದ ಪ್ರಕಾಶ್ ಶೆಟ್ಟಿ
ಕಾಂಗ್ರೆಸ್ ಟಿಕೆಟ್ ಗಾಗಿ ಲಾಬಿ ನಡೆಸುತ್ತಿರುವವರೆಂದರೆ:
1. ಜಯಪ್ರಕಾಶ್ ಹೆಗ್ಡೆ
2. ಉಡುಪಿ ಜಿಲ್ಲೆಯ ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ
3. ವಿಧಾನಪರಿಷತ್ ಮಾಜಿ ಸಭಾಪತಿ ಬಿ ಎಲ್ ಶಂಕರ್
4. ತಾರಾದೇವಿ ಸಿದ್ದಾರ್ಥ್












Click it and Unblock the Notifications