ಬಿಜೆಪಿ ಹಿರಿಯ ನಾಯಕರಿಗೆ ಯಡಿಯೂರಪ್ಪ ಅಲ್ಟಿಮೇಟಮ್

ಇದಕ್ಕೆ ತಮ್ಮನ್ನು ಮತ್ತೆ ಪಟ್ಟದ ಮೇಲೆ ಕುಳ್ಳಿರಿಸಲು ಬಿಜೆಪಿ ಹೈಕಮಾಂಡ್‌ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನವರಿ 19ರ ಗಡುವು ನೀಡಿರುವುದೇ ಸಾಕ್ಷಿ. ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಹೇಳಿತ್ತಿರುವ ಯಡಿಯೂರಪ್ಪ ಹಿರಿಯ ನಾಯಕರಿಗೆ ಗಡುವು ನೀಡಿದ್ದಾದರೂ ಏತಕೆ ಎಂಬುದು ಪ್ರಶ್ನೆ.
ಕೋಡಿಮಠ ಸ್ವಾಮೀಜಿಗಳು ನೀವು ಸದ್ಯಕ್ಕೆ ಮುಖ್ಯಮಂತ್ರಿ ಆಗಲ್ಲ ಎಂದು ಹೇಳಿದ್ದರು. ಎಲ್ ಕೆ ಅಡ್ವಾಣಿ ಕೂಡ ಯಡಿಯೂರಪ್ಪನವರ ಮಹತ್ವಾಕಾಂಕ್ಷೆಗೆ ಎಳ್ಳುನೀರು ಬಿಟ್ಟಿದ್ದರು. ಹೀಗಿದ್ದರೂ ಛಲದಂಕಮಲ್ಲನಂತೆ ಮತ್ತೆ ಮುಖ್ಯಮಂತ್ರಿ ಪದವಿಗೇರುವ ಎಲ್ಲ ಪ್ರಯತ್ನಗಳನ್ನು ಯಡಿಯೂರಪ್ಪ ಮಾಡುತ್ತಲೇ ಇದ್ದಾರೆ.
ಬಲ್ಲ ಮೂಲಗಳ ಪ್ರಕಾರ, ತೆರೆಯ ಮರೆಯಲ್ಲಿ ತಮ್ಮ ನೆಚ್ಚಿನ ಬಂಟ ಅಬಕಾರಿ ಸಚಿವ ಎಂ ರೇಣುಕಾಚಾರ್ಯ ಅವರನ್ನು ಶಾಸಕರ ಬೆಂಬಲ ಗಳಿಸಲು ಯಡಿಯೂರಪ್ಪ ಛೂ ಬಿಟ್ಟಿದ್ದಾರೆ. ಕುರ್ಚಿ ಅಲುಗಾಡುತ್ತಿರುವ ಸೂಚನೆ ಬಂದ ಹಿನ್ನೆಲೆಯಲ್ಲಿ ನಿನ್ನೆ ತಾನೆ ದೆಹಲಿಗೆ ತೆರಳಿದ್ದ ಸದಾನಂದ ಗೌಡರು ಡಿ.28ರಂದು ಈಶ್ವರಪ್ಪ ಜೊತೆಗೂಡಿ ಮತ್ತೆ ದೆಹಲಿ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮುಂದೇನಾಗುತ್ತದೆಂದು ಆ ಭವಿಷ್ಯಕಾರರೇ ನುಡಿಯಬೇಕು.












Click it and Unblock the Notifications