ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪುಹಣ ಕುರಿತು ಬೆಂಗಳೂರಲ್ಲಿ ವೆಂಕಟೇಶ್ ಭಾಷಣ

By Prasad
|
Google Oneindia Kannada News

M R Venkatesh
ಬೆಂಗಳೂರು, ಡಿ. 22 : ವಿದೇಶಿ ಬ್ಯಾಂಕ್‌ನಲ್ಲಿ ಕೂಡಿಟ್ಟಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರಬೇಕೆಂಬ ಕೂಗು ರಾಜಕೀಯ ಪಕ್ಷಗಳು, ಜನಸಾಮಾನ್ಯರಾದಿಯಾಗಿ ಎಲ್ಲರಿಂದ, ಎಲ್ಲ ಕಡೆಯಿಂದ ಕೇಳಿಬರುತ್ತಿದೆ. ಕೇಂದ್ರ ಸರಕಾರ ಮಾತ್ರ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ.

ಇಂತಹ ಸಂದರ್ಭದಲ್ಲಿ 'ವಿದೇಶದಲ್ಲಿರುವ ಭಾರತದ ಕಪ್ಪು ಹಣ' ಎಂಬ ವಿಷಯ ಕುರಿತು ಖ್ಯಾತ ಅರ್ಥಶಾಸ್ತ್ರ ಮತ್ತು ಬರಹಗಾರ ಚೆನ್ನೈನ ಎಂಆರ್ ವೆಂಕಟೇಶ್ ಅವರು ಡಿ.24, ಶನಿವಾರ ಬೆಂಗಳೂರಿನಲ್ಲಿ ಉಪನ್ಯಾಸ ನೀಡಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ, ಜಯನಗರ ಶಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಕಾರ್ಯಕ್ರಮ ಸಂಜೆ 6ರಿಂದ 8ರ ವರೆಗೆ ಜಯನಗರ ಟಿ ಬ್ಲಾಕ್‌ನ, 26ನೇ ಮುಖ್ಯ ರಸ್ತೆ, 36ನೇ ಅಡ್ಡ ರಸ್ತೆಯಲ್ಲಿರುವ ಆರ್.ವಿ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಗಳದಲ್ಲಿ ನಡೆಯಲಿದೆ. ಎಲ್ಲರಿಗೂ ಸ್ವಾಗತ ಕೋರಿದ್ದಾರೆ ಜಿ ವಿಷ್ಣು ಮೂರ್ತಿ : 99006 77126 ಅಥವಾ 94801 82295.

ವೆಂಕಟೇಶ್ ಬಗ್ಗೆ : ಸ್ವದೇಶ ಜಾಗರಣ ಮಂಚ್ ಜೊತೆ ಗುರುತಿಸಿಕೊಂಡಿರುವ ವೆಂಕಟೇಶ್ ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಸ್ವದೇಶಿ ಆರ್ಥಿಕತೆಯ ಬಗ್ಗೆ ಅವರಿಗೆ ಅಪಾರ ಪ್ರೇಮ. ಉತ್ತಮ ವಾಗ್ಮಿಯಾಗಿರುವ ವೆಂಕಟೇಶ್ ದೇಶ ವಿದೇಶಗಳಲ್ಲಿ ಆರ್ಥಿಕತೆಯ ಬಗ್ಗೆ ಅನೇಕ ಭಾಷಣಗಳನ್ನು ನೀಡಿದ್ದಾರೆ. ಡಾಲರ್ ಕ್ರೈಸಿಸ್, ಹಣದುಬ್ಬರ, ಸೆನ್ಸೆಕ್ಸ್ ಮುಂತಾದ ವಿಷಯ ಕುರಿತಂತೆ ಪುಸ್ತಕಗಳನ್ನು ಬರೆದಿರುವ ಆರ್ಥಿಕ ಪರಿಣತನ ಮಾತುಗಳನ್ನು ಕೇಳಲು ಬೆಂಗಳೂರಿನ ಜನತೆಗೆ ಉತ್ತಮ ಅವಕಾಶ.

English summary
Economist and writer M R Venkatesh from Chennai is delivering lecture on 'India's black money abroad' at R.V. Institute of Management in Jayanagar 'T' block, Bangalore on December 24, Saturday. The program is organized by Rashtreeya Swayamsevak Sangha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X