ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್ ವರ್ಲ್ಡ್ ಒನ್ ಕಿಂಗ್ ಎಂದು ಜಪಿಸುತ್ತಿರುವ ಮಲ್ಯ

By Mahesh
|
Google Oneindia Kannada News

Oneworld Airline Alliance
ನವದೆಹಲಿ, ಡಿ.22: ವಿಜಯ್ ಮಲ್ಯ ಒಡೆತನದ 'ಕಿಂಗ್‌ಫಿಷರ್ ಏರ್‌ಲೈನ್ಸ್' ತನ್ನ ಆರ್ಥಿಕ ದುಃಸ್ಥಿತಿಯನ್ನು ಸುಧಾರಿಸಿಕೊಳ್ಳುವತ್ತ ಹೆಜ್ಜೆ ಇರಿಸಿದೆ. ಜಾಗತಿಕ ವಿಮಾನ ಯಾನ ಸಂಸ್ಥೆಗಳ ಮೈತ್ರಿಕೂಟ 'ಒನ್ ವರ್ಲ್ಡ್' ಕಿಂಗ್ ಫಿಷರ್ ಏರ್ ಲೈನ್ಸ್ ಸೇರುವುದು ಖಚಿತವಾಗಿದೆ.

ಫೆ.10, 2012ರಂದು ಕಿಂಗ್‌ಫಿಷರ್, 'ಒನ್ ವರ್ಲ್ಡ್'ಗೆ ಸೇರಿಕೊಳ್ಳಲಿದೆ. ಜಾಗತಿಕ ವಿಮಾನ ಯಾನ ಸಂಸ್ಥೆ ಮೈತ್ರಿಕೂಟಕ್ಕೆ ಸೇರುವ ಮೊದಲ ಭಾರತೀಯ ವಿಮಾನ ಯಾನ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಕಿಂಗ್ ಫಿಷರ್ ಗಳಿಸಲಿದೆ.

ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ 'ಏರ್ ಇಂಡಿಯಾ' ಕೂಡ ಲುಫ್ತಾನ್ಸಾ ಏರ್ ಲೈನ್ಸ್ ನೇತೃತ್ವದ ಸ್ಟಾರ್ ಮೈತ್ರಿಕೂಟಕ್ಕೆ ಸೇರಲು ಮುಂದಾಗಿತ್ತು. ಆದರೆ, ಕೆಲ ಷರತ್ತುಗಳನ್ನು ಪೂರೈಸದ ಕಾರಣಕ್ಕೆ ಸೇರ್ಪಡೆ ಸಾಧ್ಯವಾಗಿರಲಿಲ್ಲ.

ಜಾಗತಿಕ ಮೈತ್ರಿಕೂಟ 'ಒನ್ ವರ್ಲ್ಡ್'ಗೆ ಕಿಂಗ್‌ಫಿಷರ್ ಸೇರ್ಪಡೆಗೊಳ್ಳುವುದರಿಂದ, ಮೈತ್ರಿಕೂಟದ ಎಲ್ಲ ವಿಮಾನ ಯಾನ ಸಂಸ್ಥೆಗಳ ಒಟ್ಟು ಸಾಮರ್ಥ್ಯ ಹೆಚ್ಚಾಗಲಿದೆ. ವಿಶ್ವದ ಯಾವುದೇ ಭಾಗದಲ್ಲಿ ತಡೆರಹಿತ ಪ್ರಯಾಣ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ.

ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಏನು ಲಾಭ? ಮುಂದೆ ಓದಿ...

English summary
Dr. Vijay MAllya's Kingfisher Airlines will soon join oneworld Airline alliance in Feb 10. 2012. With this global alliance Kingfisher can improve revenue. After alliance Kingfisher can will join the network of 31 airlines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X