ಬೆಂಗಳೂರಿನಲ್ಲಿ ಆಂಧ್ರ ರೆಡ್ಡಿ ಸಾಫ್ಟ್‌ವೇರ್ ಕಂಪನಿಯ ದೋಖಾ
ಬೆಂಗಳೂರು,
ಡಿ. 22: ಮಡಿವಾಳದ ರೂಪೇನ ಅಗ್ರಹಾರದಲ್ಲಿರುವ 'ಎಚ್‌ಪಿ ಫಿನ್‌ಸಾಫ್ಟ್ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್' ಎಂಬ ಕಂಪನಿ ತನ್ನ ನೂರಾರು ಐಟಿ ಉದ್ಯೋಗಿಗಳಿಗೆ ಚಳ್ಳೆಹಣ್ಣು ತಿನ್ನಿಸಿ, ಕೋಟ್ಯಂತರ ರೂಪಾಯಿ ವಂಚಿಸಿ, ಬಾಗಿಲು ಮುಚ್ಚಿಕೊಂಡು ಹೋಗಿದೆ. ಗಮನಾರ್ಹವೆಂದರೆ ಆಂಧ್ರ ಪ್ರದೇಶದಲ್ಲಿ ಇದೇ ಹೆಸರಿನ ಕಂಪನಿ ವ್ಯವಸ್ಥಿತವಾಗಿ ಆಗಾಗ್ಗೆ ಇಂತಹ ವಂಚನೆಗಳನ್ನು ಮಾಡುತ್ತಾ ಬಂದಿದೆ. id="toptextpromo">ಈ
ಸಂಬಂಧ ವಂಚನೆಗೆ ಒಳಗಾದ 'ವಾಂಟೆಜ್ ಸಾಫ್ಟ್ ವೇರ್ ಸಲ್ಯೂಷನ್ಸ್' ಎಂಬ ಕಂಪನಿಯ ವಿಕಾಸ್ ಎಂಬವರು ಮಡಿವಾಳ ಪೊಲೀಸ್ ಠಾಣೆಗೆ ಮಂಗಳವಾರ ದೂರು ಕೊಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಎಚ್‌ಪಿ
ಫಿನ್‌ಸಾಫ್ಟ್ ಕಂಪನಿಯು ಸುಮಾರು 65 ಲಕ್ಷ ರೂ. ಮೋಸ ಮಾಡಿದೆ ಎಂದು ವಿಕಾಸ್ ದೂರಿನಲ್ಲಿ ತಿಳಿಸಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಎಚ್‌ಪಿ ಫಿನ್‌ಸಾಫ್ಟ್ ಕಂಪನಿ ಕಾರ್ಯಾರಂಭ ಮಾಡಿತ್ತು. ನೂತನ ಕಂಪನಿಗೆ ಬೇಕಾದ ಸುಮಾರು 65 ಲಕ್ಷ ರೂ. ಮೌಲ್ಯದ ಕಂಪ್ಯೂಟರುಗಳನ್ನು ವಾಂಟೇಜ್ ಸಾಫ್ಟ್ ವೇರ್ ಸಲ್ಯೂಷನ್ಸ್‌ನಿಂದ ಖರೀದಿಸಿತ್ತು. ಆದರೆ ಹಣ ಪಾವತಿಸಿರಲಿಲ್ಲ. ಈಗ ಕಂಪನಿಯೇ ಬಂದ್ ಆಗಿದೆ.











Click it and Unblock the Notifications