ಟೆಕ್ಕಿಗಳಿಗೆ ಕೋಟ್ಯಂತರ ರೂ ಉಂಡೆನಾಮ ತಿಕ್ಕಿದ ಹನುಮಂತ ರೆಡ್ಡಿ

ನೇಮಕಗೊಂಡ ಪ್ರತಿ ಅಭ್ಯರ್ಥಿಯಿಂದಲೂ 70 ಸಾವಿರದಿಂದ 1 ಲಕ್ಷ ರೂ.ವರೆಗೆ ಭದ್ರತಾ ಠೇವಣಿ ನೆಪದಲ್ಲಿ ಹಣ ವಸೂಲಿ ಮಾಡಿದೆ. ಹೀಗೆ, ಕೆಲಸಕ್ಕೆ ಆಯ್ಕೆಯಾಗಿದ್ದ 1600 ಮಂದಿಯೂ ಹಣ ಪಾವತಿಸಿ, ಕೆಲಸಕ್ಕೂ ಸೇರಿದ್ದರು. ಆದರೆ, ಕಂಪನಿ ಆ ಸಿಬ್ಬಂದಿಗೆ ಈವರೆಗೂ ಸಂಬಳ ನೀಡಿರಲಿಲ್ಲ. ರಾಜ್ಯ ಹಾಗೂ ಹೊರ ರಾಜ್ಯದ ಸಾಫ್ಟವೇರ್ ಎಂಜಿನಿಯರುಗಳು ಈ ಕಂಪನಿಯಿಂದ ಮೋಸಹೋಗಿದ್ದು, ಹಲವರು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ಹನುಮಂತ ಪ್ರಸಾದ್ ರೆಡ್ಡಿ ಎಂಬಾತ ಎಚ್‌ಪಿ ಫಿನ್‌ಸಾಫ್ಟ್ ಕಂಪನಿ ಮಾಲೀಕನಾಗಿದ್ದು, ಈತ ಮೂಲತಃ ಆಂಧ್ರ ಪ್ರದೇಶದ ವಿಜಯವಾಡದವ. ಈತ ಇದೇರೀತಿ ಆಂಧ್ರ ಸೇರಿದಂತೆ ಹಲವು ನಗರಗಳಲ್ಲಿ ಕಂಪನಿ ಆರಂಭಿಸುವುದಾಗಿ ಹೇಳಿ ಅಭ್ಯರ್ಥಿಗಳಿಂದ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ದೂರುದಾರ ವಿಕಾಸ್ ಆರೋಪಿಸಿದ್ದಾರೆ.
ಮೋಸ ಹೋಗಿರುವ ಕಂಪನಿಯ ಉದ್ಯೋಗಿಗಳು ಪ್ರತ್ಯೇಕ ದೂರುಗಳನ್ನು ನೀಡುವ ಬದಲು ಎಲ್ಲರೂ ಒಟ್ಟಿಗೆ ದೂರು ಸಲ್ಲಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಆ ಮೂಲಕ ತಲೆಮರೆಸಿಕೊಂಡಿರುವ ಎಚ್‌ಪಿ ಫಿನ್‌ಸಾಫ್ಟ್ ಕಂಪನಿ ಮಾಲೀಕ ಪ್ರಸಾದ್ ರೆಡ್ಡಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications