ಡಿವಿಎಸ್ ಗೆ ಸಿಕ್ತು ಪಕ್ಷೇತರರ ಬೆಂಬಲ, ಗೆಲುವು ಖಚಿತ

DV Sadananda gowda
ಬೆಂಗಳೂರು, ಡಿ.21 : ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಗುರುವಾರ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿವಿ ಸದಾನಂದ ಗೌಡ ಅವರು ಜಯ ಗಳಿಸುವುದು ಖಾತ್ರಿಯಾಗಿದೆ.

ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಪಕ್ಷೇತರ ಶಾಸಕರ ಬೆಂಬಲ ನೀಡುವುದಾಗಿ ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ತಂಗಡಗಿ ಅವರು ಹೇಳಿಕೆ ನೀಡಿದ್ದಾರೆ.

119 ಬಿಜೆಪಿ ಶಾಸಕರನ್ನು ರೆಸಾರ್ಟ್ ನಲ್ಲಿ ಕಾಯುತ್ತಿರುವ ಪಕ್ಷಾಧ್ಯಕ್ಷ ಕೆಎಸ್ ಈಶ್ವರಪ್ಪ, ನಾಳೆ ನೇರವಾಗಿ ವಿಧಾನಸೌಧಕ್ಕೆ ಆಗಮಿಸುವುದಾಗಿ ಹೇಳಿದ್ದಾರೆ.

ಪೀಣ್ಯ ರಸ್ತೆಯ ಗೋಲ್ಡನ್ ಪಾಮ್ ರೆಸಾರ್ಟ್ ನಿಂದ ಬೆಳಗ್ಗೆ 8 ಗಂಟೆಯೊಳಗೆ ಶಾಸಕರನ್ನು ಕರೆತರಲಾಗುತ್ತದೆ. ಜೆಡಿಎಸ್ ನಿಲುವು ನಮಗೆ ಖುಷಿ ತಂದಿದೆ ಎಂದು ಈಶ್ವರಪ್ಪ ಹೇಳಿದರು,

ಶಾಸಕ ಶ್ರೀರಾಮುಲು ಪರ ಇದ್ದ ಪಕ್ಷೇತರರು ಬಿಜೆಪಿ ಪರ ವಾಲಿದ್ದರಿಂದ 22 ಶಾಸಕರ ಬೆಂಬಲ ಇದೆ ಎಂದು ರಾಮುಲು ಹೇಳಿದ ಮಾತು ಸುಳ್ಳಾಗಿದೆ. ವಿಪಕ್ಷಗಳು ಕೂಡಾ ಸದಾನಂದ ಗೌಡರ ಮುಖಭಂಗಕ್ಕೆ ಮುಂದಾಗುವ ಪ್ರಯತ್ನ ಕೈ ಬಿಟ್ಟಿದೆ.

ಯಡಿಯೂರಪ್ಪ ಬೆಂಬಲ: ಜನವರಿ 15ರ ತನಕ ಸದಾನಂದ ಗೌಡರನ್ನು ಪಟ್ಟದಿಂದ ಕೆಳಗಿಳಿಸುವುದಿಲ್ಲ ಎಂದು ಯಡಿಯೂರಪ್ಪ ಬಣ ಹೇಳಿದೆ. ಜೆಡಿಎಸ್ ಕೂಡಾ ಸದಾನಂದ ಗೌಡರನ್ನು ಬೆಂಬಲಿಸುವ ಸಾಧ್ಯವಿದೆ.

ಶಾಸಕ ಬಾಲಚಂದ್ರ ಜಾರಕಿಹೊಳಿ ಬಂಡಾಯ ಬಣ ಕೂಡಾ ಯಾವುದೇ ತಂತ್ರ ಪ್ರಯೋಗಕ್ಕೆ ಮುಂದಾಗಿಲ್ಲ. ಹೀಗಾಗಿ ಡಿವಿ ಸದಾನಂದ ಗೌಡರಿಗೆ ಸುಲಭ ಜಯ ಖಚಿತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+