ಬೆಳಗಿನ ಉಪಹಾರಕ್ಕೆ ಗೌಡರ ಮನೆಗೆ ದೌಡಾಯಿಸಿದ ಪಕ್ಷೇತರರು
ಬೆಂಗಳೂರು,
ಡಿ. 21: ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಮೇಲ್ಮನೆ ಆಯ್ಕೆ ಹಾದಿ ಸುಗಮವಾಗಿದೆ. ಬುಧವಾರ ಬೆಳಗ್ಗೆ ಸದಾನಂದ ಗೌಡರ ಮನೆಯಲ್ಲಿ 'ಉಪಹಾರ ರಾಜಕೀಯ' ನಡೆದಿದ್ದು, ಐದು ಪಕ್ಷೇತರ ಶಾಸಕರು ಮುಖ್ಯಮಂತ್ರಿ ಜತೆ ಉಪಹಾರ ಸವಿದಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರೂ ಸಹ ಉಪಸ್ಥಿತರಿದ್ದರು. id="toptextpromo">'ಸದಾನಂದ
ಗೌಡ ಉತ್ತಮ ಸಿಎಂ. ನಾಳೆ ನಡೆಯುವ ಮೇಲ್ಮನೆ ಚುನಾವಣೆಯಲ್ಲಿ ಅವರು ಖುದ್ದು ಬೆಂಬಲ ಯಾಚಿಸಿದ್ದಾರೆ. ಈ ಬಗ್ಗೆ ಪಕ್ಷೇತರರ ನಿಲುವು ಏನೆಂಬುದನ್ನು ಶೀಘ್ರವೇ ಸಮಾಲೋಚಿಸಿ, ನಿರ್ಧಾರ ಕೈಗೊಳ್ಳಲಿದ್ದೇವೆ' ಎಂದು ಪಕ್ಷೇತರ ಶಾಸಕರ ಪರವಾಗಿ ಶಿವರಾಜ ತಂಗಡಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ನಾಯಕರ ಜತೆ ಉಪಹಾರ ಸೇವಿಸಿದ ಇತರೆ ಪಕ್ಷೇತರ ಶಾಸಕರೆಂದರೆ ಸುಧಾಕರ್, ಗೂಳಿಹಟ್ಟಿ ಚಂದ್ರಶೇಖರ್, ಬಾಲಚಂದ್ರ ಜಾರಕಿಹೊಳಿ ಮತ್ತು ನರೇಂದ್ರ ಸ್ವಾಮಿ. ಇದೇ ವೇಳೆ, ಬಿಜೆಪಿ ಶಾಸಕರ ದಂಡು ಗೋಲ್ಡನ್ ಪಾಮ್ ರೆಸಾರ್ಟಿಗೆ ತೆರಳಿದೆ.











Click it and Unblock the Notifications