ಯಡಿಯೂರಪ್ಪಗೆ ಡೆಡ್ ಲೈನ್ ಹಾಕಿದ ಕುಮಾರಸ್ವಾಮಿ

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ಅನಗತ್ಯ ಚುನಾವಣೆ ಜನತೆಗೂ ಬೇಡ, ಜೆಡಿಎಸ್ ಕೂಡಾ ಬೆಂಬಲಿಸುವುದಿಲ್ಲ. ಮೇಲ್ಮನೆ ಚುನಾವಣೆಯಲ್ಲಿ ಸದಾನಂದ ಗೌಡರು ಗೆದ್ದರೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಯಡಿಯೂರಪ್ಪ ಹೇಳಿಕೆ ನೀಡಲಿ.
ತೆರೆಮರೆ ಆಟವಾಡುತ್ತಾ, ಸಂಸದರನ್ನು ಮುಂದಿಟ್ಟುಕೊಂಡು ಹೈಕಮಾಂಡ್ ಬಯಸಿದರೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರು ರಾಜಕೀಯ ಅಸ್ಥಿರತೆ ಸೃಷ್ಟಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದು ಕುಮಾರಸ್ವಾಮಿ ದೂರಿದರು.
ಡಿವಿಎಸ್ ಗೆ ಜೆಡಿಎಸ್ ಬೆಂಬಲ?: 'ಗೌಡ'ರನ್ನು ಬೆಂಬಲಿಸಿ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಂದ ಸೂಚನೆ ಸಿಕ್ಕ ನಂತರ ಕುಮಾರಸ್ವಾಮಿ ಅವರು ಸದಾನಂದ ಗೌಡರನ್ನು ಬೆಂಬಲಿಸುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಆದರೆ, ಯಡಿಯೂರಪ್ಪ ಅವರ ಹೇಳಿಕೆಗಳಿಂದ ಕಿರಿಕಿರಿ ಉಂಟಾಗುತ್ತಿದ್ದು, ನಾಳೆಯೊಳಗೆ ಯಡಿಯೂರಪ್ಪ ಅವರು ತಮ್ಮ ನಿಲುವು ಪ್ರಕಟಿಸಿದರೆ, ಸಿಎಂ ಡಿವಿಎಸ್ ಗೆ ಜೆಡಿಎಸ್ ಬೆಂಬಲ ಸಿಗುವ ಎಲ್ಲಾ ಲಕ್ಷಣಗಳಿವ. ಇಲ್ಲದಿದ್ದರೆ ಜೆಡಿಎಸ್ ತನ್ನ ದಾರಿ ತಾನು ನೋಡಿಕೊಳ್ಳಲಿದೆ.












Click it and Unblock the Notifications