ಫಾರಿನ್ ಪ್ರಯಾಣದ ಯೋಗಾಯೋಗ ದರ್ಶಿನಿ

ಆದರೆ ಅನೇಕ ಕಾರಣಗಳಿಂದ ಹಲವರ ಫಾರಿನ್ ಕನಸು ಕನಸಾಗಿಯೇ ಉಳಿಯುತ್ತೆ. ಅಂದಹಾಗೆ ನಿಮಗೆ ಗೊತ್ತಾ? ಏನೇ ಸಮಸ್ಯೆ ಎದುರಾದರೂ, ಜಾತಕದಲ್ಲಿ ನಿಮಗೆ ವಿದೇಶ ಯೋಗವಿದ್ದರೆ ನೀವು ಫಾರಿನ್ ಗೆ ಹೋಗುವುದನ್ನು ತಡೆಯಲು ಆ ಭಗವಂತನಿಂದಲೂ ಸಾಧ್ಯವಿಲ್ಲ ಎನ್ನುತ್ತದೆ ವೈದಿಕ ಜ್ಯೋತಿಷ್ಯ.
ವ್ಯಕ್ತಿಯ ರಾಶಿಯೊಂದಿಗೆ ಗ್ರಹಗಳ ಚಲನ ವಲನವನ್ನು ಅನುಸರಿಸಿ ಆ ವ್ಯಕ್ತಿ ವಿದೇಶಕ್ಕೆ ಪ್ರಯಾಣಿಸಬಹುದಾ? ಎಷ್ಟು ಕಾಲ ಅಲ್ಲಿ ಉಳಿಯಬಹುದು ಎಂಬುದರ ಬಗ್ಗೆ ಕೆಲವು ಮಹತ್ವದ ಟಿಪ್ಸ್ ನೀಡುತ್ತೆ ವೈದಿಕ ಜ್ಯೋತಿಷ್ಯ. ರಾಶಿ ಮತ್ತು ಗ್ರಹಗಳ ಚಲನವಲನದೊಂದಿಗೆ ಕುಂಡಲಿಯಲ್ಲಿನ ದಶಾ ಅಥವಾ ಅಂತರ್ದಶಾವನ್ನು ಪರಿಶೀಲಿಸಿ ಜ್ಯೋತಿಷಿಗಳು ವಿದೇಶ ವೃತ್ತಿಯ ಕುರಿತು ಮಾಹಿತಿ ನೀಡುತ್ತಾರೆ.
ವಿದೇಶಕ್ಕೆ ಹೋಗುವ ಸಾಧ್ಯತೆಯನ್ನು ತಿಳಿಸುವಲ್ಲಿ ಸಾಮಾನ್ಯವಾಗಿ ಮೊದಲು ಗಣನೆಗೆ ತೆಗೆದುಕೊಳ್ಳುವ ಅಂಶವೆಂದರೆ ವ್ಯಕ್ತಿಯ ಜಾತಕದಲ್ಲಿ ವಿದೇಶ ಯೋಗವಿದೆಯೇ ಎನ್ನುವುದು. ಅಂತಹ ಸಾಧ್ಯತೆ ಇದ್ದರೆ, ಯಾವಾಗ ಮತ್ತು ಎಷ್ಟು ಕಾಲ ಎಂದು ತಿಳಿಯಬಹುದು. ಅಷ್ಟೇ ಅಲ್ಲ, ವಿದೇಶ ವೃತ್ತಿ ಪಡೆಯಲು ಯಾವುದಾದರೂ ಸಮಸ್ಯೆಯಿದೆಯೇ? ಈ ಸಮಸ್ಯೆಗೆ ಪರಿಹಾರವಿದೆಯೇ? ಸಂಪೂರ್ಣ ಮಾಹಿತಿಯನ್ನೂ ವ್ಯಕ್ತಿಯ ಕುಂಡಲಿಯಿಂದ ಪಡೆದು ವಿದೇಶ ಯೋಗವನ್ನು ತಿಳೀಯಬಹುದು.
ಕುಂಡಲಿಯ 9 ಮತ್ತು 12ನೇ ಮನೆಯಲ್ಲಿ ವಿದೇಶ ಪ್ರಯಾಣದ ಯೋಗಾಯೋಗ
ಕುಂಡಲಿಯಲ್ಲಿನ ಕೆಲವು ಮನೆಗಳು ನಿಮ್ಮ ವಿದೇಶದ ಕನಸನ್ನು ತಿಳಿಸುತ್ತವೆ. ವಿದೇಶಕ್ಕೆ ಹೋಗುವ ಯೋಗವನ್ನು ಪ್ರಮುಖವಾಗಿ 9 ಮತ್ತು 12ನೇ ಮನೆಯಿಂದ ತಿಳಿಯಬಹುದು.
* ಕುಂಡಲಿಯ 2ನೇ ಮನೆ ವಿದೇಶದ ಕೆಲಸದಿಂದ ಹಣ ಗಳಿಕೆಯ ಬಗ್ಗೆ ಸುಳಿವು ನೀಡುತ್ತದೆ.
* ವ್ಯಾಪಾರ ಮೂಲಕ ವಿದೇಶದಲ್ಲಿನ ಕೆಲಸವನ್ನು 7ನೇ ಮನೆ ಸೂಚಿಸುತ್ತದೆ.
ಕೆಲವು ಚಲನಶೀಲ ರಾಶಿಯವರ (ಮೇಷ, ಕರ್ಕ, ತುಲಾ, ಮಕರ) ಅಥವಾ ಜಲ ಮೂಲ ರಾಶಿಯವರಲ್ಲಿ (ಕರ್ಕ, ವೃಷ್ಚಿಕ, ಮೀನ) ಈ ಮನೆಗಳಿದ್ದರೆ ಇಂತಹವರಿಗೆ ವಿದೇಶದ ಕೆಲಸದ ಯೋಗವಿರುತ್ತದೆ. ಕರ್ಕ ರಾಶಿಯವರು ಈ ಎರಡೂ ವಿಧದ ರಾಶಿಯಲ್ಲಿರುವುದರಿಂದ ಇವರಿಗೆ ವಿದೇಶ ಯೋಗ ಗ್ಯಾರಂಟಿ ಎನ್ನುತ್ತದೆ ಜ್ಯೋತಿಷ್ಯ.
ಈ ಚಲನಶೀಲ ರಾಶಿ ತಾಯ್ನಾಡಿನಿಂದ ಬೇರೆಡೆಗೆ ಹೆಚ್ಚು ಕಾಲ ತಂಗುವುದನ್ನು ಸಂಕೇತಿಸಿದರೆ, ಜಲ ಮೂಲ ರಾಶಿ ವಿದೇಶಕ್ಕೆ ಆಗಾಗ್ಗೆ ಹೋಗುವುದನ್ನು ಪ್ರತಿನಿಧಿಸುತ್ತದೆ. ವೈದಿಕ ಜ್ಯೋತಿಷ್ಯದಿಂದ ವ್ಯಕ್ತಿ ಪ್ರಯಾಣಿಸುವ ದಿಕ್ಕನ್ನೂ ತಿಳಿದುಕೊಳ್ಳಬಹುದು. ಉದಾಹರಣೆಗೆ ಮಿಥುನ, ತುಲಾ ಮತ್ತು ಕುಂಭ ರಾಶಿಯವರು ಪಶ್ಚಿಮ ದಿಕ್ಕನ್ನು ಪ್ರತಿನಿಧಿಸುತ್ತಾರೆ.
ನಿಮಗೆ ಶುಭ ಮತ್ತು ಅಶುಭ ತರುವ ಗ್ರಹಗಳನ್ನೂ ಪರಿಶೀಲಿಸಬಹುದು. ಇದು ನಿಮ್ಮ ವಿದೇಶ ಕೆಲಸದ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಗ್ರಹಗಳ ಶುಭ ಮತ್ತು ಅಶುಭ ಚಲನವಲನವನ್ನು ತಿಳಿದುಕೊಂಡರೆ ನಿಮ್ಮ ಗುರಿಯತ್ತ ಮುನ್ನಡೆಯಲು ಸಹಕಾರಿಯಾಗುತ್ತದೆ.












Click it and Unblock the Notifications