ಜನಾರ್ದನ ರೆಡ್ಡಿ ಭಯಂಕರ 'ಆರ್ಥಿಕ ಭಯೋತ್ಪಾದಕ'
ಹೈದರಾಬಾದ್,
ಡಿ. 18: ಓಬಳಾಪುರಂ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲುಪಾಲಾಗಿರುವ ಕರ್ನಾಟಕದ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಮತ್ತು ಆತನ ಸೋದರ ಸಂಬಂಧಿ ಬಿ.ವಿ. ಶ್ರೀನಿವಾಸ್ ರೆಡ್ಡಿ ಪಕ್ಕಾ ಕ್ರಿಮಿನಲ್ ಗಳು ಎಂದು ಇಲ್ಲಿನ ಸಿಬಿಐ ವಿಶೇಷ ಕೋರ್ಟಿಗೆ ಸಿಬಿಐ ತಿಳಿಸಿದೆ. id="toptextpromo">ರೆಡ್ಡಿಗಳನ್ನು
'ಆರ್ಥಿಕ ಭಯೋತ್ಪಾದಕರು' ಎಂದು ಬಣ್ಣಿಸಿರುವ ಪ್ರಕರಣದ ತನಿಖಾ ಸಂಸ್ಥೆ, ಇವರಿಬ್ಬರಿಗೂ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನ್ಯಾಯಾಧೀಶರಲ್ಲಿ ಅರಿಕೆ ಮಾಡಿಕೊಂಡಿದೆ. id='are-slot-1' class='oiad oi-axt oiadv'> id='top-searched-articles'>'ಸಾಮಾನ್ಯವಾಗಿ
ಭಯೋತ್ಪಾದಕರು ಅಂದರೆ ಸ್ಫೋಟಕಗಳನ್ನು ಬಳಸಿ, ಸಮಾಜಘಾತುಕರಾಗುತ್ತಾರೆ. ಆದರೆ ಈ ಪ್ರಕರಣದಲ್ಲಿ ರೆಡ್ಡಿಗಳ ಆರ್ಥಿಕ ಭಯೋತ್ಪಾದಕತೆ ಸೃಷ್ಟಿಸಿರುವ ಸ್ಫೋಟಕಗಳು ನೇರವಾಗಿ ಸಾಮಾನ್ಯ ಜನರ ಕಣ್ಣಿಗೆ, ಕಿವಿಗೆ ಬೀಳುತ್ತಿಲ್ಲ. ಆದರೆ ಅವರು ಸಂತ್ರಸ್ತರಾಗಿ ಅದರ ಕೆಟ್ಟ ಪರಿಣಾಮಗಳನ್ನು ಎದುರಿಸುವಂತಾಗಿದೆ' ಎಂದು ಸಿಬಿಐ ವಾದಿಸಿದೆ.











Click it and Unblock the Notifications