3 ತರುಣಿಯರ ಜೊತೆ 2 ತರುಣರು, ಸುಳ್ಯ ಉದ್ವಿಗ್ನ

ಜಾರ್ಖಂಡ್ ಮೂಲದ ಈ ಯುವಕ, ಯುವತಿಯರು ಕಾಳಸಂತೆಯಲ್ಲಿ ಕಪ್ಪುಹಣ ಮಾರಾಟಕ್ಕೆ ಬಂದಿದ್ದರೆನ್ನಲಾಗಿದೆ. ಪೊಲೀಸರು ಇವರನ್ನು ವಿಚಾರಿಸಿದ ನಂತರ ಬಿಡುಗಡೆ ಗೊಳಿಸಿದ್ದಾರೆ. ಠಾಣೆಯಿಂದ ಇವರು ವಾಪಾಸ್ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಇವರನ್ನು ತಡೆದಿದ್ದಾರೆ. ಈ ಸಂಬಂಧ ಪೋಲೀಸ್ ಸ್ಟೇಷನ್ ಆವರಣದಲ್ಲೇ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಅಷ್ಟಕ್ಕೂ ಸುಮ್ಮನಿರದ ಕಾರ್ಯಕರ್ತರು ಸ್ಟೇಷನ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ನಡೆಸಿದ ಪೊಲೀಸರು ಐವತ್ತಕ್ಕೂ ಹೆಚ್ಚು ಮಂದಿಯನ್ನು ಬುಧವಾರ (ಡಿ.14) ಬಂಧಿಸಿದ್ದಾರೆ. ಸುಳ್ಯ ಪಟ್ಟಣದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ಇಂದು ರಜೆ (ಡಿ.15) ರಜೆ ಘೋಷಿಸಲಾಗಿದೆ.
ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಂತರ್ ಧರ್ಮ ಪ್ರೇಮ ಪ್ರಕರಣ, ಅತ್ಯಾಚಾರ ಮುಂತಾದ ಘಟನೆಗಳಿಗೂ, ಈ ಘಟನೆ ಕೂಡ ಅದೇ ರೀತಿ ಇರಬಹುದೆಂದು ತಪ್ಪು ಅರ್ಥೈಸಿಕೊಂಡು ಈ ಘಟನೆ ನಡೆದಿದೆ ಎಂದು ನಮ್ಮ ಮಂಗಳೂರು ವರದಿಗಾರರು ತಿಳಿಸಿದ್ದಾರೆ.












Click it and Unblock the Notifications